Header Ads
Breaking News

ಮೀನುಗಾರಿಕಾ ಇಲಾಖೆಯಿಂದ ಪರಿಹಾರ ಧನ ವಿತರಣೆ : ಕಾಪು ತಾಲೂಕು ಕಚೇರಿಯಲ್ಲಿ ಸಚಿವ ಕೋಟಾರಿಂದ ವಿತರಣೆ

ಕಾಪು ತಾಲೂಕು ಕಛೇರಿಯಲ್ಲಿ ಮೀನುಗಾರಿಕಾ ಇಲಾಖೆಯ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ಬಿಡುಗಡೆಗೊಂಡ ಐದು ಲಕ್ಷ ರೂ. ಮೊತ್ತದ ಪರಿಹಾರ ನಿದಿಯ ಚೆಕ್‍ಗಳನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿತರಿಸಿದರು.

ಇದೇ ವೇಳೆ ಮಾತನಾಡಿದ ಸಚಿವರು, ಮೀನುಗಾರಿಕಾ ಮನೆಗಳ ನಿರ್ಮಾಣಕ್ಕೆ ರಾಜೀವ ಗಾಂಧಿ ವಸತಿ ನಿಗಮದಲ್ಲಿ ಜಮಾವಣೆಯಾಗಿದ್ದ 20 ಕೋಟಿ ರೂ. ಅನುದಾನವನ್ನು ಕೆಎಫ್‍ಡಿಸಿಗೆ ವರ್ಗಾವಣೆ ಮಾಡಾಲಾಗಿದೆ. ಈ ಹಿಂದೆ ಮನೆಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಮೀನುಗಾರರಿಗೂ ಶೀಘ್ರದಲ್ಲೇ ಮನೆ ಭಾಗ್ಯ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಮೀನುಗಾರರಿಗೆ ಅವಘಡದಲ್ಲಿ ಸಾವು ನೋವು ಸಂಭವಿಸಿದಾಗ ಪರಿಹಾರ ವಿತರಣೆಯಲ್ಲಿ ಹೆಚ್ಚಿನ ಮೊತ್ತದ ಪರಿಹಾರ ಮೀನುಗಾರರಿಗೆ ನೀಡಬೇಕಿದೆ ಎಂದಿದ್ದು, ಕರಾವಳಿ ಮೀನುಗಾರಿಕಾ ರಸ್ತೆ ದುರಸ್ತಿಗೆ ಹೆಚ್ಚು ಅನುದಾನ ಒದಗಿಸುವಂತೆ ಸಚಿವರನ್ನು ಒತ್ತಾಯಿಸಿದರು.ಈ ಸಂದರ್ಭ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಪುರಸಭೆ ಮುಖ್ಯಾದಿಕಾರಿ ವೆಂಕಟೇಶ ನಾವಡ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *