Header Ads
Breaking News

ಮೀಯಪದವು ಶಿಕ್ಷಕಿಯ ನಿಗೂಢ ಸಾವು ಪ್ರಕರಣ : ತನಿಖೆ ತ್ವರಿತಗೊಳಿಸುವಂತೆ ಸಿಪಿಐ ಮಂಡಲ ಸಮಿತಿಯಿಂದ ಒತ್ತಾಯ

ಮಂಜೇಶ್ವರ: ಜನವರಿ 16 ರಂದು ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಎರಡು ದಿವಸ ಕಳೆದು ಕೊಯಿಪ್ಪಾಡಿ ಸಮುದ್ರ ಕಿನಾರೆಯಲ್ಲಿ ಹಲವಾರು ಶಂಕೆಗಳಿಗೆ ಕಾರಣವಾಗುವ ಸ್ಥಿತಿಯಲ್ಲಿ ಪತ್ತೆಯಾದ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆಯ ಅಧ್ಯಾಪಿಕೆ ರೂಪಶ್ರೀ ಸಾವಿನ ಕುರಿತು ನಡೆಯುತ್ತಿರುವ ತನಿಖೆಯನ್ನು ತ್ವರಿತಗೊಳಿಸಿ ಸಾವಿಗೆ ಕಾರಣಕರ್ತನಾದ ಆರೋಪಿಯನ್ನು ಕೂಡಲೆ ಬಂಧಿಸುವಂತೆ ಸಿಪಿಐ ಮಂಜೇಶ್ವರ ಮಂಡಲ ಸಮಿತಿಯಿಂದ ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ ರಾಜನ್ ಈ ಘಟನೆ ನಾಡಿನ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಊರವರು ಹಾಗೂ ಕುಟುಂಬಸ್ಥರು ಶಂಕೆಯನ್ನು ವ್ಯಕ್ತಪಡಿಸುತ್ತಿರುವ ಸದ್ರಿ ಶಾಲೆಯ ಅಧ್ಯಾಪಕನನ್ನು ಬಂಧಿಸಿ ಕಾನೂನಿನ ಮುಂದೆ ತರಬೇಕಾದದ್ದು ಅನಿವಾರ್ಯವಾಗಿದೆ. ಊರವರು ಹಾಗೂ ವಿದ್ಯಾರ್ಥಿಗಳು ನಾಡಿನ ಪೌರ ಜನತೆ ನಿರಂತರವಾಗಿ ಪ್ರತಿಭಟನೆಯನ್ನು ನಡೆಸುವುದನ್ನು ನೋಡುವಾಗ ಈ ವಿಷಯದ ಬಗ್ಗೆ ತಳೆದಿರುವ ಆಕ್ರೋಷವನ್ನು ವ್ಯಕ್ತಪಡಿಸುತ್ತದೆ. ಶಂಕಿತ ಆರೋಪಿಯನ್ನು ವಿದ್ಯಾಲಯದಿಂದ ಹೊರದಬ್ಬದಿದ್ದರೆ ಸ್ಥಿತಿ ಇನ್ನಷ್ಟು ಸಂಕೀರ್ಣಗೊಳ್ಳಲಿರುವುದಾಗಿ ಅವರು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಸಿಪಿಐ ಮಂಡಲ ಕರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಎ ಐ ವೈ ಎಫ್ ಮಂಡಲ ಕಾರ್ಯದರ್ಶಿ ಹರೀಶ್ ಕೆ.ಆರ್, ಮಂಡಲ ಕಮಿಟಿ ಸದಸ್ಯ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *