Header Ads
Breaking News

ಮೀಯಪದವು ಶಿಕ್ಷಕಿಯ ನಿಗೂಢ ಸಾವು ಪ್ರಕರಣ : ಸಹೋದ್ಯೋಗಿ ಅಧ್ಯಾಪಕನ ಬಂಧನ

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯ ಅಧ್ಯಾಪಿಕೆ ಚಿಗುರುಪಾದೆ ನಿವಾಸಿ ಬಿ ಕೆ ರೂಪಶ್ರೀ ಯವರ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಮರಳಿನಡಿಯಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರೊಳಗೆ ಮತ್ತೆ ಮೂರು ಸಣ್ಣ ಬ್ಯಾಗುಗಳು ಪತ್ತೆಯಾಗಿದ್ದು, ಜೊತೆಯಾಗಿ ಶಾಲೆಯ ಗುರುತು ಕಾರ್ಡ್ ಹಾಗೂ ನಗದು 650 ರೂ. ಹಾಗೂ ಮೆಮೊರಿ ಕಾರ್ಡ್ ಲಭಿಸಿದೆ.

ಮೀನು ಕಾರ್ಮಿಕನೊಬ್ಬನಿಗೆ ವ್ಯಾನಿಟಿ ಬ್ಯಾಗ್ ಕಂಡಿದ್ದು ಕೂಡಲೇ ಅವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಇದರಂತೆ ಘಟನಾ ಸ್ಥಳಕ್ಕೆ ತಲುಪಿದ ಮಂಜೇಶ್ವರ ಪೊಲೀಸರು ವ್ಯಾನಿಟಿ ಬ್ಯಾಗನ್ನು ವಶಕ್ಕೆ ತೆಗೆದಿದ್ದಾರೆ. ಶವ ಪತ್ತೆಯಾದ ಕೊಯಿಪ್ಪಾಡಿ ಕಡಪ್ಪುರಕ್ಕೂ ಇದೀಗ ವ್ಯಾನಿಟಿ ಬ್ಯಾಗ್ ಪತ್ತೆಯಾದ ಕಣ್ವತೀರ್ಥ ಸಮುದ್ರ ಕಿನಾರೆಗೂ ಹಲವಾರು ಕಿಲೋ ಮೀಟರುಗಳ ಅಂತರವಿದೆ. ಪತ್ತೆಯಾದ ವ್ಯಾನಿಟಿ ಬ್ಯಾಗ್ ಸ್ವಲ್ಪವೂ ನೀರು ತಾಗದೆ ಹೂತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಇನ್ನಷ್ಟು ಶಂಕೆಗಳಿಗೆ ಕಾರಣವಾಗಿತ್ತು.ಈ ಸಾವಿನ ಹಿಂದೆ ಇದೀಗ ಕಾಣದ ಕೈಯೊಂದು ಕಾರ್ಯಾಚರಿಸಿರುವ ರೀತಿಯಲ್ಲಿ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ಹೊಸ ತಿರುವನ್ನು ಪಡೆಯುತ್ತಿತ್ತು. ಕೊನೆಗೂ ಕ್ರೈಂ ಬ್ರಾಂಚ್ ಇದೊಂದು ವ್ಯವಸ್ಥಿತವಾಗಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದನ್ನು ಪತ್ತೆ ಹಚ್ಚಿ ಕೊಲೆಗೈದ ಸಹೋದ್ಯೋಗಿ ಅಧ್ಯಾಪಕ ವೆಂಕಟರಮಣನನ್ನು ಬಂಧಿಸಲಾಗಿದೆ.

Related posts

Leave a Reply

Your email address will not be published. Required fields are marked *