Header Ads
Header Ads
Breaking News

ಮುಂಗಾರು ರಂಗ ಸುಗ್ಗಿ ಕಾರ್ಯಕ್ರಮ. ರಂಗ ಸ್ಪಂದನ ರಿಜಿಸ್ಟರ್ ನೇತೃತ್ವದಲ್ಲಿ ಆಯೋಜನೆ. ಮಂಗಳೂರಿನ ಮಣ್ಣಗುಡ್ಡ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಕಾರ್ಯಕ್ರಮ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗ ಸ್ಪಂದನ ರಿಜಿಸ್ಟರ್ ನೇತೃತ್ವದಲ್ಲಿ ನಗರದ ಮಣ್ಣಗುಡ್ಡ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಮುಂಗಾರು ರಂಗ ಸುಗ್ಗಿ ಕಾರ್ಯಕ್ರಮ ಜರುಗಿತ್ತು.ಮಂಗಳೂರಿನ ಮಣ್ಣಗುಡ್ಡ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ರಂಗ ಸ್ಪಂದನ ರಿಜಿಸ್ಟರ್ ನೇತೃತ್ವದಲ್ಲಿ ಮುಂಗಾರು ರಂಗ ಸುಗ್ಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ಕಾರ್ಯಕ್ರಮವನ್ನು ಎಸ್.ಎಲ್.ಶೇಟ್ ಜ್ಯುವೆಲ್ಲರ್‍ಸ್ ಆಂಡ್ ಡೈಮಂಡ್ ಹೌಸ್ ಆಡಳಿತ ಪಾಲುದಾರರಾದ ಪದ್ಮಾ ಆರ್.ಶೇಟ್ ಉದ್ಘಾಟಿಸಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಿಂದ್ ಮಜ್ದೂರ್ ಸಭಾ ಅಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು, ಶಾಲೆಗೆ ಹೆಸ್ರು ಬರುವ ಕೆಲಸ ಮಾಡಬೇಕೆಂದರು ರಂಗಸ್ಪಂದನ ರಿಜಿಸ್ಟರ್ ಸಂಚಾಲಕರಾದ ವಿ.ಜಿ.ಪಾಲ್ ಅವರು ಗಣ್ಯರನ್ನು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣಗೈದರು  ಇನ್ನು ಸಾಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಗಮನ ಸೆಳೆದವು. ಖಾತ್ಯ ಸಂಗೀತ ನಿರ್ದೇಶಕ ಮುರಳೀಧರ್ ಕಾಮತ್ ಮತ್ತು ಮಂಜಳಾ ಶೆಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಈ ವೇಳೆ ಕೋಶಾಧಿಕಾರಿ ಧನಂಜಯ್‌ಪುತ್ರನ್ ಬೆಂಗ್ರೆ , ಸಂಘಟನಾ ಕಾರ್ಯದರ್ಶಿ ಸುರೇಶ್ ಬಾಬು, ಹಳೆಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ. ಸಬಿನಾ ಬಾನು, ತುಳುಕೂಟದ ದೇವಿ ಶೆಟ್ಟಿ, ಶಾಲಾ ಪ್ರಬಾರ ಮುಖ್ಯೋಪಾಧ್ಯಾಯಿನಿ ಮೀರಾ ಎಂ.ವಿ ಸೇರಿದಂತೆ ಇನ್ನಿತರು ಉಪಸ್ಥಿತಿರಿದ್ದರು.

Related posts

Leave a Reply