Header Ads
Header Ads
Breaking News

ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿ4ನ್ಯೂಸ್ ನ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2

ಭರ್ಜರಿ ಹಾಸ್ಯ ಪ್ರದರ್ಶನಗಳ ಮೂಲಕ ಜನರ ಮನಗೆದ್ದಿರುವ ಸಿಪಿಎಲ್ ಸೀಸನ್ 2ಪ್ರೇಕ್ಷಕರಿಗೆ ಭರ್ಜರಿ ಹಾಸ್ಯದ ರಸದೌತಣವನ್ನು ಉಣಬಡಿಸುತ್ತಿದೆ. ಯಶಸ್ವಿಯಾಗಿ ಜನಮನ ರಂಜಿಸುತ್ತಿರುವ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2ನ ನಾಲ್ಕನೇ ಹಂತದ ಪ್ರದರ್ಶನಾ ಪಂದ್ಯವು ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು. ತಂಡಗಳ ಹೈವೋಲ್ಟೇಜ್ ಕಾಮಿಡಿ ಪ್ರದರ್ಶನವು ಸೇರಿದ್ದ ಪ್ರೇಕ್ಷಕರ ಹೊಟ್ಟೆಯನ್ನು ಹುಣ್ಣಾಗಿಸಿತು.


 ಕಾಮೆಡಿ ಪ್ರೀಮಿಯರ್ ಲೀಗ್. ತನ್ನ ಸುದ್ದಿ, ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮನೆಮಾತಾಗಿರುವ ವಿ೪ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ. ಮೊದಲ ಆವೃತ್ತಿಯಲ್ಲಿ ಜನಮನ ರಂಜಿಸಿ ಜನರ ಮನಗೆದ್ದಿರುವ ಸಿಪಿಎಲ್ ತನ್ನ ಎರಡನೇ ಸೀಸನ್‌ನಲ್ಲಿ ಕೂಡ ಭರ್ಜರಿ ಯಶಸ್ಸು ಕಂಡಿದೆ. ಈಗಾಗಲೇ ಜನಮನ ಗೆದ್ದಿರುವ ಸಿಪಿಎಲ್ ಸೀಸನ್ 2ನ ನಾಲ್ಕನೇ ಹಂತದ ಮನರಂಜನಾ ಹಬ್ಬ ಮಂಗಳೂರು ಹೊರವಲಯದ ಮುಡಿಪು ಸೂರಜ್‌ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಿತು. ಮೂರುದಿನಗಳ ಕಾಲ ನಡೆದ ಸೂರಜ್ ಕಲಾಸಿರಿ-ಕರಾವಳಿಯ ಕಲಾವೈಭವಕ್ಕೆ ಸಿಪಿಎಲ್ ವಿಶೇಷ ಮೆರುಗು ತಂದುಕೊಟ್ಟಿತು.

ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್‍ಸ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುತ್ತಿರುವ ಸಿಪಿಎಲ್ ಸೀಸನ್ ೨ನ ನಾಲ್ಕನೇ ಪಂದ್ಯವು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಮೊದಲ ಸ್ಪರ್ಧೆಯು ಹೆವನ್ ರೋಸ್ ಪಾಪಿ ಕಲಾವಿದರು ಮತ್ತು ಯುಎಂ ವಿಷ್ಣು ಕಲಾವಿದರು ತಂಡಗಳ ನಡುವೆ ನಡೆಯಿತು. ದ್ವಿತೀಯ ಪ್ರದರ್ಶನಾ ಪಂದ್ಯವು ಎಸ್ಸೆನ್ ವರ್ಗೋ ಫ್ರೆಂಡ್ಸ್ ಮತ್ತು ಗೋಹೀಲ್ ಸಾಕ್ಷಿ ಕಲಾವಿದರ ನಡುವರೆ ನಡೆಯಿತು. ಮೂರನೇ ಪಂದ್ಯದಲ್ಲಿ ಕಾರ್ ಡೆಕೋರ್ ಹರಿಣಿ ಮತ್ತು ವಿಎನ್‌ಆರ್ ಗೋಲ್ಡ್ ಬಂಟ್ವಾಳ ಕಲಾವಿದರು ಭರ್ಜರಿ ಪ್ರದರ್ಶನ ನೀಡಿದರು. ವಿಶೇಷ ಆಕರ್ಷಣೆಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಸೂರಜ್ ಶಿಕ್ಷಣ ಸಂಸ್ಥೆಯ ಮಕ್ಕಳ ಮೂಲಕ ನಡೆದ ಪ್ರದರ್ಶನವು ಪ್ರೇಕ್ಷಕರ ಮನಗೆದ್ದಿತು.

ಕಾರ್ಯಕ್ರಮದಲ್ಲಿ ತುಳುನಾಡಿನಲ್ಲಿ ಭಾರೀ ಸೆನ್ಸೇಷನ್ ಮೂಡಿಸಿರುವ ರಾರಾ ತುಳು ಚಲನಚಿತದ ನಿರ್ಮಾಪಕ ಎನ್‌ಆರ್‌ಕೆ ವಿಶ್ವನಾಥ್, ನಿರ್ದೇಶಕಿ ಲಲಿತಾಶ್ರೀ, ನಟ ಪುರುಷೋತ್ತಮ ಅಂಚನ್, ನಟಿಯರಾದ ಸುವರ್ಣಶೆಟ್ಟಿ, ಭಾರ್ಗವಿ, ಅನೋಲಾ ಭಾಗವಹಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.  ಜೊತೆಗೆ ಅಬ್ಬ ಬ್ಯಾರಿ ಚಲನಚಿತ್ರದ ನಿರ್ಮಾಪಕ ಎಂ.ಜಿ. ರಹೀಂ, ರಾಜ್ಯ ಪ್ರಶಸ್ತಿ ವಿಜೇತ ನಟ ಎಂ.ಕೆ. ಮಠ ಉಪ್ಪಿನಂಗಡಿ, ಸಾಹಿತಿ ಹುಸ್ಸೈನ್ ಕಾಟಿಪಳ್ಳ ಭಾಗವಹಿಸಿ ಚಿತ್ರದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೊ.ಪಿ.ಎಚ್.ಎಫ್. ಮಂಜುನಾಥ್ ಎಸ್. ರೇವಣ್ಕರ್ ಅವರನ್ನು ಅಭಿನಂದಿಸಲಾಯಿತು.

 ಸಿಪಿಎಲ್ ಸೀಸನ್ 2ರ ಮುಖ್ಯ ತೀರ್ಪುಗಾರರಾದ ಮೈಮ್ ರಾಮ್‌ದಾಸ್ ಮತ್ತು ಶಶಿರಾಜ್ ಕಾವೂರು ಅವರ ಜೊತೆಗೆ ವಿಶೇಷ ತೀರ್ಪುಗಾರರಾಗಿ ಖ್ಯಾತ ಹಿರಿಯ ರಂಗಕಲಾವಿದರಾದ ಶಿವಪ್ರಕಾಶ್ ಪೂಂಜ ಹರೇಕಳ, ಲಕ್ಷ್ಮಣ್ ಕುಮಾರ್ ಮಲ್ಲೂರು, ಸೂರಜ್ ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕಿ ವಿಮಲಾ ಶೆಟ್ಟಿ. ದೈಹಿಕ ಶಿಕ್ಷಕ ಇಸ್ಮಾಯಿಲ್ ವಿಟ್ಲ ಭಾಗವಹಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.

ಪ್ರದರ್ಶನ ನೀಡಿದ ತಂಡಗಳಿಗೆ ೫ ಸಾವಿರ ರೂ. ಗೌರವಧನವನ್ನೊಳಗೊಂಡ ಸೂರಜ್ ಕಲಾಸಿರಿ ಅವಾರ್ಡ್, ಸುಚಿತ್ರಾ-ಪ್ರಭಾತ್ ಚಿತ್ರಮಂದಿರದ ವತಿಯಿಂದ ಮೂವೀ ಟಿಕೆಟ್ ಕೂಪನ್ ವಿತರಿಸಲಾಯಿತು. ಸೂರಜ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಮುಖ್ಯಶಿಕ್ಷಕಿ ವಿಮಲಾ ಶೆಟ್ಟಿ, ಅಪೂರ್ವ ಬಿಲ್ಡರ್‍ಸ್ ಮಾಲಕ ಗಣೇಶ್ ಶೆಟ್ಟಿ, ವಿ4 ನ್ಯೂಸ್ ನಿರ್ದೇಶಕ ಲಕ್ಷ್ಮಣ್ ಕುಂದರ್, ವಿ4ನ್ಯೂಸ್‌ನ ಉಪಾಧ್ಯಕ್ಷೆ ರೋಸ್ಲಿನ್ ಡಿಲೀಮಾ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಪ್ರದರ್ಶನ ನೀಡಿದ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಗಣ್ಯರಿಗೆ, ವಿಶೇಷ ತೀರ್ಪುಗಾರರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್‍ಸ್ ಸಹಭಾಗಿತ್ವದಲ್ಲಿ ಕಾಮೆಡಿ ಪ್ರೀಮಿಯರ್ ಲೀಗ್ ಸೀಸನ್ ೨ ಮನರಂಜಿಸಲಿದೆ. ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆವರೇಜ್ ಪಾರ್ಟ್‌ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‌ಟೈನ್ಮೆಂಟ್ ಪಾರ್ಟ್‌ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‌ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡುತ್ತಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋರ್ಟ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‌ಎಫ್‌ಎಂ, ಎಸ್‌ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ ೨ ಜನಮನ ಗೆಲ್ಲುತ್ತಿದೆ.

Related posts

Leave a Reply