Header Ads
Header Ads
Breaking News

ಮೂಡುಬಿದಿರೆಯಲ್ಲಿ ಮಳೆಯ ಅವಾಂತರ,ಧರೆಗುರುಳಿದ ವಿದ್ಯುತ್ ಕಂಬಗಳು

ಮಂಗಳವಾರ ಸುರಿದ ಅಧಿಕ ಮಳೆಯಿಂದಾಗಿ ಮೂಡುಬಿದಿರೆ ಪೇಟೆ ಸಹಿತ ಗ್ರಾಮಾಂತರ ಪ್ರದೇಶಗಳಲ್ಲಿ ಮುಖ್ಯ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ, ಪೇಟೆಯಲ್ಲಿರುವ ಚರ್ಚ್‌ನ ಆವರಣಗೋಡೆ ಕುಸಿದಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.

ಪೊನ್ನೆಚ್ಚಾರಿ ರಸ್ತೆಯ ಬಳಿ ಇರುವ ಕೋರ್ಪುಸ್ ಕ್ರಿಸ್ತಿ ಚರ್ಚ್‌ನ ಆವರಣಗೋಡೆ ಕುಸಿದ ಪರಿಣಾಮ ಮೆಸ್ಕಾಂನ ಸೆಕ್ಷನ್‌ಲೈಸರ್ ಕಂಬ ಧರೆಗುರುಳಿದೆ. ಸುಮಾರು ೧ ಲಕ್ಷ ರೂಪಾಯಿವರೆಗೆ ನಷ್ಟವಾಗಿರಬಹುದೆಂದು ಮೆಸ್ಕಾಂ ಅಧಿಕಾರಿಗಳು ಅಂದಾಜಿಸಿದ್ದಾರೆ. ಮೆಸ್ಕಾಂನ ಕಂಬ ಧರೆಗುರುಳಿದ ತೀವ್ರತೆಗೆ ಚರ್ಚ್ ಬಳಿ 6 ವಿದ್ಯುತ್ ಕಂಬ ವಾಲಿದೆ. ಚರ್ಚ್ ಆವರಣ ಗೋಡೆ ಕುಸಿಯುವ ಸಂದರ್ಭ ಮಾಸ್ತಿಕಟ್ಟೆ-ಮೂಡುಬಿದಿರೆ ರಸ್ತೆಯಲ್ಲಿ ಹೆಚ್ಚಿನ ವಾಹನದಟ್ಟನೆ ಹಾಗೂ ಜನಸಂಚಾರವಿಲ್ಲದ ಕಾರಣ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.ಮೆಸ್ಕಾಂ ಸಿಬ್ಬಂದಿಗಳು ಕಂಬವನ್ನು ಸುಸ್ಥಿತಿಗೆ ತರುತ್ತಿರುವುದು ಕಂಡು ಬಂತು. ಮೂಡುಬಿದಿರೆ ಪೇಟೆ-ಮಾಸ್ತಿಕಟ್ಟೆ-ಇರುವೈಲ್ ರಸ್ತೆಯಲ್ಲಿನ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

 

ಮೂಡುಬಿದಿರೆ ನಗರದಲ್ಲಿ ಮಧ್ಯಾಹ್ನ ನಂತರ ವಿದ್ಯುತ್ ಸಂಪರ್ಕ ಕಡಿತಗೊಂಡಿತು.ಪ್ರತಿವರ್ಷದಂತೆ ಈ ಬಾರಿಯೂ ಜೋರಾಗಿ ಸುರಿದ ಮಳೆಯಿಂದಾಗಿ ಮೂಡುಬಿದಿರೆ ಪೇಟೆಯ ವಿಜಯನಗರ ಪ್ರದೇಶದಲ್ಲಿ ಮಳೆ ನೀರು ಅಂಗಡಿ ಒಳಗೆ ನುಗ್ಗಿದೆ. ಪೇಟೆಗೆ ತಾಗಿಕೊಂಡಿರುವ ಗೌರಿ ದೇವಸ್ಥಾನದ ಬಳಿ ನೀರಿನ ತೋಡು ಬ್ಲಾಕ್ ಆಗಿ ಸುತ್ತಮತ್ತಲಿನ ಮನೆಗಳ ಒಳಗೆ ನೀರು ನುಗ್ಗಿದೆ. ದೊಡ್ಮನೆ ಪರಿಸರದಲ್ಲಿ ರಸ್ತೆಬದಿಯ ಮಣ್ಣುಗಳು ರಸ್ತೆಯಲ್ಲಿ ಹರಡಿಕೊಂಡಿದ್ದು, ದ್ವಿಚಕ್ರವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

Related posts

Leave a Reply