Header Ads
Breaking News

ಮೂಡುಬಿದಿರೆಯಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ : ಎಲ್. ಗೋಯೆಲ್‌ರಿಂದ ಮಾಹಿತಿ

ಕಳೆದ ಸೆಪ್ಟೆಂಬರ್‌ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೂಲಕ ಉದ್ಘಾಟನೆಗೊಂಡ ಮೂಡುಬಿದಿರೆಯ ಜಿ.ವಿ. ಪೈ ಮೆಮೊರಿಯಲ್ ಹಾಸ್ಪಿಟಲ್‌ನಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಆರ್ಗನ್ ಡೊನೇಷನ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಹಾಗೂ ಪಂಡಿತ್ ಹೆಲ್ತ್ ರೆಸಾರ್ಟ್ ಆಂಡ್ ಸ್ಪಾದ ಪ್ರವರ್ತಕ ಲಾಲ್ ಗೋಯೆಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಭಾರತದಲ್ಲಿ ಅಂಗಾಂಗ ದಾನದ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಜಿ.ವಿ. ಪೈ ಆಸ್ಪತ್ರೆಯಲ್ಲಿ ಆರ್ಗನ್ ಟ್ರಾನ್ಸ್‌ಪ್ಲಾಂಟ್ ವಿಭಾಗವನ್ನು ಆರಂಭಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭ ಮೂಡುಬಿದಿರೆ ಕ್ಷೇತ್ರದ ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಲಾಲ್ ಗೋಯೆಲ್ ಅವರನ್ನು ಅಭಿನಂದಿಸಿದರು. ಈ ಸಂದರ್ಭ ಆಸ್ಪತ್ರೆಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಡಾ. ಮುರಳಿ ಕೃಷ್ಣ, ಜೆ.ಜೆ. ಪಿಂಟೋ, ರಾಮ್‌ಪ್ರಸಾದ್ ಭಟ್, ಉಮೇಶ್ ಪೈ, ಉಮೇಶ್ ರಾವ್, ಮನೋಜ್ ಶೆಣೈ, ಜಯಗೋಪಾಲ್ ತಲಪಾಡಿ, ಡಾ. ಕೇಶವಚಂದ್ರ ತೇಜಸ್ವಿ, ಡಾ. ಸಂಗೀತಾ, ಡಾ. ಹರೀಶ್ ನಾಯಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *