Breaking News

ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ಪ್ರಕರಣ ಈ ವಿಚಾರದಲ್ಲಿ ವೈದ್ಯರ ತಪ್ಪಿದೆ ಅಂತನಿಸುತ್ತಿಲ್ಲ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಹೇಳಿಕೆ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಅಮಾನವೀಯ ಪ್ರಕರಣ ನಡೆದಿದ್ದು, ಈ ವಿಚಾರದಲ್ಲಿ ವೈದ್ಯರ ತಪ್ಪಿದೆ ಎಂದು ಅನಿಸುತ್ತಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸ್ಟ್ರೇಚರ್ ಇಲ್ಲ ಅಂದ್ರೆ ಆ ಮಹಿಳೆ ವೈದ್ಯರಲ್ಲಿ ಹೇಳಬಹುದಿತ್ತು. ಆನಾರೋಗ್ಯದವನ್ನು ಎಳೆದುಕೊಂಡು ಹೋದ್ರೆ ಯಾರ ತಪ್ಪು? ವೈದ್ಯರು ತಪ್ಪು ಮಾಡಿದ್ದರೆ ಶಿಕ್ಷ ಆಗಬೇಕು. ಹೀಗಾಗಿ ಇಡೀ ಸರ್ಕಾರಿ ವ್ಯವಸ್ಥೆಯನ್ನು ಅವಹೇಳನ ಮಾಡಬಾರದು. ಯಾವುದು ಸರಿ ಅನ್ನುವುದನ್ನು ತಿಳಿಯದೆ ತಪ್ಪಾಗಿ ಬಿಂಬಿಸಬಾರದು. ಇದರಿಂದ ನೇರ ತೊಂದರೆಗೆ ಒಳಗಾಗುವವರು ಬಡವರು ಎಂದ ಅವರು. ಈಗಾಗಲೇ ತನಿಖೆಗೆ ಆದೇಶ ಮಾಡಿದ ಮುಂದೆ ಏನಾಗುತ್ತದೆ ಅಂತಾ ನೋಡೋಣ ಎಂದರು.

Related posts

Leave a Reply