Header Ads
Header Ads
Breaking News

ಮೊಡಂಕಾಪಿನಲ್ಲಿ ರೋಗಭೀತಿ ಆವರಿಸಿರುವ ಹಿನ್ನೆಲೆ : ದೂರಿಗೆ ಸ್ಪಂದಿಸಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಭೇಟಿ

ಬಂಟ್ವಾಳ: ಪುರಸಭಾ ವ್ಯಾಪ್ರಿಯ ಬಿ.ಮೂಡ ಗ್ರಾಮದ ಮೊಡಂಕಾಪಿನ ವಸತಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ವಸತಿಸಮುಚ್ಚಯ, ಶೌಚಾಲಯದ ಕೊಳಚೆ ನೀರು ಚರಂಡಿಯಲ್ಲಿ ಹರಿಯಬಿಡುತ್ತಿದ್ದು, ರೋಗಭೀತಿ ಅವರಿಸಿರವ ಹಿನ್ನಲೆಯಲ್ಲಿ ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಗುರುವಾರ ಅಧಿಕಾರಿಗಳೊಂದಿಗೆ ಹಠಾತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮೊಡಂಕಾಪು, ಕಾರಂತಕೋಡಿ ಪರಿಸರದ ಮಳೆನೀರು ಹರಿಯುವ ಚರಂಡಿಯಲ್ಲಿ ವಸತಿ ಸಮುಚ್ಚಯ , ಹೊಟೇಲ್, ಶೌಚಾಲಯದ ಕೊಳೆಚೆ ನೀರು ಹರಿಯ ಬಿಟ್ಟರುವ ದೃಶ್ಯ ಕಂಡು ಹಾಗೂ ಪರಿಸರ ಗುಬ್ಬವಾಸನೆಯ ಬೀರುತ್ತಿರವುದರಿಂದ ಅಸಮಧಾನಗೊಂಡ ಶಾಸಕರು ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡರಲ್ಲದೆ ಈ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚಿಸಿದರು.

ಇಲ್ಲಿರುವ ಕೆಲ ವಸತಿ ಸಮಚ್ಚಯ, ಕೋಳಿ ಅಂಗಡಿ, ಹಾಗೂ ಶೌಚಾಲಯದ ಕೊಳಚೆ ನೀರನ್ನು ಮಳೆ ನೀರು ಹರಿದು ಹೋಗುವ ಸಾರ್ವಜನಿಕ ಚರಂಡಿಯಲ್ಲಿ ಹರಿಯಬಿಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ರೋಗ ಭೀತಿ ಉಂಟಾಗಿದೆಯಲ್ಲದೆ ಕೆಲವರು ಈಗಾಗಲೇ ಅನಾರೋಗ್ಯಕ್ಕೂ ತುತ್ತಾಗಿದ್ದು, ಈ ಬಗ್ಗೆ ಸ್ಥಳೀಯರು ಪುರಸಭೆ ಸಹಿತ ಸಂಬಂಧಿಸಿದ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಬುಧವಾರ ಸ್ಥಳಿಯರ ನಿಯೋಗವೊಂದು ಶಾಸಕ ರಾಜೇಶ್ ನಾಕ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ರು. ಇದಕ್ಕೆ ಸ್ಪಂದಿಸಿದ ಶಾಸಕರು ಗುರುವಾರ ಬೆಳಿಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರಾಧಿಕಾರಿ ರಾಜಶೇಖರ್ ಪುರಾಣಿಕ್ , ಉಪಪರಿಸರಾಧಿಕಾರಿ ಕೀರ್ತಿ ಕುಮಾರ್, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಕರ್ನಾಟಕ ನಗರ ನೀರು ಮತ್ತು ಒಳಚರಂಡಿಯೋಜನೆಯ ಶೋಭಾಲಕ್ಷ್ಮಿಯವರನ್ನೊಳಗೊಂಡು ಸ್ಥಳ ಪರಿಶೀಲನೆ ನಡೆಸಿದರು. ಮಳೆ ನೀರು ಹರಿಯುವ ಚರಂಡಿಯಲ್ಲಿ ವಸತಿ ಸಮುಚ್ಚಯ ಸಹಿತ ಶೌಚಾಲಯದ ಕೊಳಚೆ ನೀರು ವಿವಿಧ ಭಾಗಗಳಿಂದ ಹರಿದುಕೊಂಡು ಈ ಚರಂಡಿಯನ್ಮು ಸೇರುತ್ತಿರುವುದನ್ನು ಕಂಡು ಗರಂ ಆದ ಶಾಸಕ ರಾಜೇಶ್ ನಾಯ್ಕ್ ವಸತಿ ಸಮುಚ್ಚಯದವರು ಅಲ್ಲಲ್ಲೇ ಇಂಗು ಗುಂಡಿ ನಿರ್ಮಿಸಿ ವ್ಯವಸ್ಥೆ ಕಲ್ಪಿಸಿದ ಮೇಲೆಯೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು, ಬೇಕಾಬಿಟ್ಟಿ ಅನುಮತಿ ನೀಡಿರುವುದರಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ನೀರು ಹರಿಯ ಬಿಡುವುದನ್ನು ಬಂದ್ ಮಾಡುವಂತೆ ಸೂಚಿಸಿದರು. ಈ ವ್ಯವಸ್ಥೆಯನ್ನು ಕಂಡು ಪರಿಸರಾಧಿಕಾರಿ ಪುರಾಣಿಕ್ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಶಾಸಕರು ಈ ಸಂದರ್ಭ ದಲ್ಲಿ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು. ಕೊಳಚೆ ನೀರು ಹರಿಯುವುದರಿಂದ ಈ ಭಾಗದ ಬಾವಿ ನೀರು ಕಲುಷಿತಗೊಂಡಿರುವುದು, ಅನಾರೋಗ್ಯಕ್ಕೀಡಾಗಿರುವುದು ಸಹಿತ ವಿವಿಧ ಸಮಸ್ಯೆಗಳ ಬಗ್ಗೆಯು ಸ್ಥಳೀಯರು ಶಾಸಕರು, ಪರಿಸರಾಧಿಕಾರಿಯವರ ಗಮನಸೆಳೆದರು. ಒಂದು ವಸತಿ ಸಮುಚ್ಚಯದಿಂದ ತ್ಯಾಜ್ಯ ವಸ್ತು, ಕಸಕಡ್ಡಿಗಳನ್ನು ಪಕ್ಕದ ತೋಟಕ್ಕೆ ಎಸೆದಿರುವುದು ಮತ್ತು ಕೊಳಚೆ ನೀರನ್ನು ಹರಿಯಬಿಟ್ಟಿರುವುದು ಕಂಡುಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಈಗಾಗಲೇ ಇಲ್ಲಿನ ಆರು ಮಂದಿ ಕಟ್ಟಡ ಮಾಲೀಕರಿಗೆ ಡಿ. 12 ರವರೆಗೆ ಗಡುವು ವಿಧಿಸಿ ಅಂತಿಮ ನೊಟೀಸ್ ಜಾರಿಮಾಡಲಾಗಿದೆ. ಆ ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಪೊಲೀಸರ ಸಹಕಾರ ಪಡೆದು ಪುರಸಭೆಯಿಂದಲೇ ಅದನ್ನು ಮುಚ್ಚುವ ಕಾರ್ಯ ಮಾಡಲಿದೆ ಎಂದರು.

ಈ ಸಂದರ್ಭ . ಪುರಸಭಾ ಸದಸ್ಯ ಲೋಲಾಕ್ಷ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ, ವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ, ಸತೀಶ್ ಶೆಟ್ಟಿ ಮೊಡಂಕಾಪು, ಬೋಜ ಸಾಲಿಯಾನ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಸುರೇಶ್ ಟೈಲರ್, ಪವನ್, ಪ್ರದೀಪ್ ಅಜ್ಜಿಬೆಟ್ಟು ಉಪಸ್ಥರಿದ್ದು, ಶಾಸಕರ ಮುಂದೆ ಅಹವಾಲು ಮಂಡಿಸಿದರು.

Related posts

Leave a Reply