Header Ads
Header Ads
Breaking News

ರಾಜ್ಯದಲ್ಲಿ ಅರಾಜಕತೆ ಆಡಳಿತ ಇರೋದು ಗೊತ್ತಾಗುತ್ತಿದೆ : ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿಯಲು ಸಿದ್ಧ ಅಂತ ಕುಮಾರಸ್ವಾಮಿ ಹೇಳುತ್ತಿದ್ದು ರಾಜ್ಯದಲ್ಲಿ ಅರಾಜಕತೆಯ ಆಡಳಿತ ಇರೋದು ಇದರಿಂದ ಗೊತ್ತಾಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಬಜೆಟ್ ತಯಾರಿ ನಡೆಯುವಾಗಲೇ ಕಾಂಗ್ರೇಸ್ ಶಾಸಕರ ಅಸಹಕಾರ ಬಗ್ಗೆ ಸಿಎಂ ಮಾತಾಡಿದಾರೆ. ರಾಜ್ಯದಲ್ಲಿ ಅರಾಜಕತೆಯ ಆಡಳಿತ ಇದೆ ಅನ್ನೊದು ಗೊತ್ತಾಗುತ್ತೆ.ರೆಸಾರ್ಟ್ ನಲ್ಲಿ ಶಾಸಕರು ಹೊಡ್ಕೊಂಡು ತಲೆಗೆ ಹನ್ನೆರಡು ಹೊಲಿಗೆ ಹಾಕೋತಾರೆ.ಪೆಟ್ ತಿಂದವ್ರಿಗೂ ನಾವಿದೇವೆ ಅಂತಾರೆ…ಪೆಟ್ ಹೊಡ್ದವ್ರಿಗೂ ನಾವಿದ್ಧೇವೆ ಅಂತಾರೆ.

ಈ ಸರ್ಕಾರ ಬಹಳ ದಿವಸ ಬಾಳೋದಿಲ್ಲ.ಕಾಂಗ್ರೇಸ್ ಜೆಡಿಎಸ್ ನಡುವೆ ಪರಸ್ಪರ ಸಹಕಾರ ಇಲ್ಲ.ಜೆಡಿಎಸ್ ನವ್ರು ಕಾಂಗ್ರೇಸ್ ನ ಬೆಂಬಲ ಪಡೆಯುವ ಮಾನಸಿಕ ಸ್ಥಿತಿಯಲ್ಲಿ ಇಲ್ಲ.ಸಿಎಂ ರಾಜಿನಾಮೆ ಕೊಡ್ತಾರೆ ಅಂತಾದ್ರೆ ನಾವು ಬೇಡ ಅನ್ನೋ ದಿಲ್ಲ.ಕಾಂಗ್ರೇಸ್ ಶಾಸಕರು ಸಿದ್ದರಾಮಯ್ಯನೇ ನಮ್ಮ ಸಿಎಂ ಅಂತ ನೇರವಾಗಿ ಹೇಳ್ತಾರೆ. ಇಷ್ಟು ಹೇಳಿದ ಮೇಲೆ ಪರಸ್ಪರ ವಿಶ್ವಾಸ ಇಲ್ಲ ಅನ್ನೋದು ಖಚಿತ. ಬರುವ ಸದನದಲ್ಲಿ ಸರ್ಕಾರ ದ ಅರಾಜಕತೆ ಬಗ್ಗೆ ಧ್ವನಿ ಎತ್ತುತ್ತೇವೆ. ಯಡ್ಯೂರಪ್ಪ ನೇತೃತ್ವದಲ್ಲಿ ಪ್ರಬಲ ವಿರೋಧ ಪಕ್ಷದ ಕೆಲಸ ಮಾಡ್ತಿದ್ದೇವೆ ಎಂದರು.

Related posts

Leave a Reply