Header Ads
Header Ads
Breaking News

ವಿಟ್ಲ ಕೊಡಾಜೆಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತ

ವಿಟ್ಲ: ಪ್ರತಿನಿತ್ಯ ಈ ಹೆದ್ದಾರಿಯಲ್ಲಿ ಅಪಘಾತ. ಒಂದೇ ಅಪಘಾತದಲ್ಲಿ ಮೂರು ಬಲಿ ತೆಗೆದುಕೊಂಡ ಹೆದ್ದಾರಿ. ಇದೀಗ ಸೂಕ್ತ ನಿರ್ವಹಣೆ ಇಲ್ಲದೆ ರಸ್ತೆಯಲ್ಲಿ ಹೊಂಡಗಳು. ಚರಂಡಿ ಹೂಳೆತ್ತದೆ ನೀರು ರಸ್ತೆಯಲ್ಲಿ ನಿಂತು ಮತ್ತಷ್ಟು ಜೀವವನ್ನು ಬಲಿ ತೆಗೆಕೊಳ್ಳಲು ನಿಂತಿದೆ. ಇದು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿಯ ದುಸ್ಥಿತಿ.ಮಾಣಿ ಸಂಪಾಜೆ ರಸ್ತೆ ಪುನರ್ ನಿರ್ಮಾಣದ ಸಮಯದಲ್ಲಿ ಹಲವು ಅವ್ಯವಸ್ಥೆಗಳು ನಡೆದಿದ್ದು, ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಅವೈಜ್ಞಾನಿಕವಾಗಿಯೇ ಕಾಮಗಾರಿ ನಡೆದಿದ್ದು, ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ವಾಹನ ಓಡಾಟಕ್ಕೆ ಸಮಸ್ಯೆಗಳಾಗುತ್ತಿದೆ.ಕಳಪೆ ಚರಂಡಿ ಕಾಮಗಾರಿಯಿಂದಾಗಿ ಹಲವು ಕಡೆಯಲ್ಲಿ ಚರಂಡಿಗಳು ಮುಚ್ಚಿಹೋಗಿವೆ. ಕೆಲವು ಕಡೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ವಾಗದ ಕಾರಣದಿಂದ ಇಂದು ಜನಸಾಮಾನ್ಯರು ನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ.

n

ಕಾಮಗಾರಿ ನಡೆದ ಬಳಿಕ ಸೂಕ್ತ ನಿರ್ವಹಣೆಯ ಕೆಲಸವನ್ನು ಸಂಬಂಧಪಟ್ಟವರು ನಡೆಸದೇ ಇದ್ದುದರಿಂದ ರಸ್ತೆಯ ಡಾಮರು ಹಲವು ಕಡೆಯಲ್ಲಿ ಎದ್ದು ಹೋಗಿ ಬೃಹತ್ ಹಳ್ಳಗಳು ನಿರ್ಮಾಣವಾಗಿದೆ. ಮಳೆ ನೀರು ರಸ್ತೆಯ ಹಳ್ಳದಲ್ಲಿ ತುಂಬಿಕೊಂಡಿರುವುದರಿಂದ ವಾಹನ ಸವಾರಿಗೆ ಚಲಾವಣೆ ಸವಾಲಾಗಿ ಪರಿಣಮಿಸುತ್ತಿದೆ.ಸದ್ಯ ಶಿರಾಡಿ ಗಾಟಿ ಮುಚ್ಚಿರುವ ಹಿನ್ನಲೆಯಲ್ಲಿ ಮಾಣಿ ಮೈಸೂರು ರಸ್ತೆಯನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರು ಇದೇ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಿದ್ದು, ನಿತ್ಯ ಅಪಘಾತಗಳು ನಡೆಯುತ್ತಿದೆ. ಅಧಿಕಾರಿಗಳ ಉದಾಸೀನತೆಗೆ ಜನರು ಹಿಡಿ ಶಾಪ ಹಾಕುವಂತಾಗುತ್ತಿದೆ.ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ರಸ್ತೆಯ ಸಮೀಪ ಬಾರಿ ಗಾತ್ರದ ಹಳ್ಳ ರಸ್ತೆಯಲ್ಲಿ ನಿರ್ಮಾಣವಾಗಿದ್ದು, ವಾಹನಗಳು ವಿರುದ್ಧ ದಿಕ್ಕಿನಲ್ಲಿ ಹೋಗಬೇಕಾಗುತ್ತದೆ. ಎದುರಿನಿಂದ ವೇಗವಾಗಿ ವಾಹನ ಬಂದರೆ ಅಪಘಾತ ನಿಶ್ಚಿತ. ಇದೇ ಸ್ಥಳದಲ್ಲಿ ಬಸ್ ಹಾಗೂ ಓಮ್ನಿ ಹಿಕ್ಕಿಯಾಗಿ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿತ್ತು. ಈಗ ಹಳ್ಳ ನಿರ್ಮಾಣವಾಗಿ ನಿತ್ಯ ಅಪಘಾತ ಸಂಭವಿಸುವ ಹಾಗೇ ಆಗಿದೆ.

Related posts

Leave a Reply