Header Ads
Breaking News

ರಾಮಕೃಷ್ಣ ಮಿಷನ್‌ನಿಂದ 5 ಹಂತದ 20ನೇ ಸ್ವಚ್ಛ ಮಂಗಳೂರು ಶ್ರಮದಾನ

ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ವರ್ಷದ 20ನೇ ಭಾನುವಾರದ ಶ್ರಮದಾನ ನಡೆಯಿತು. ಸ್ವಚ್ಛತಾ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಉಪಸ್ಥಿತಿಯಲ್ಲಿ ಬೆಂದೂರವೆಲ್ ವೃತ್ತದಲ್ಲಿ ಶಿವರಾಮ ಅಡ್ಡೂರ್ ರೋಟೆರಿಯನ್ ಸೀ ಸೈಡ್ ರೋಟರಿ ಕ್ಲಬ್ ಮಂಗಳೂರು ಹಾಗೂ ಶ್ರದ್ಧಾ, ಸಮಾಜ ಸೇವಕಿ ಬೆಂಗಳೂರು ಇವರುಗಳು ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಕಿಶೋರ್ ಕುಮಾರ್, ಕೋಡಿಬೆಟ್ಟು ರಾಜಲಕ್ಷ್ಮೀ, ವಾಸಂತಿ ನಾಯಕ್, ರವಿ ಕೆ ಆರ್, ಸುನಂದಾ ಶಿವರಾಂ, ಶಶಿರೇಖಾ, ಯೋಗಲಕ್ಷ್ಮೀ, ಹರ್ಷಿತಾ, ಶಬರಿಕುಮಾರಿ, ಶ್ರವಣಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  ಈ ಸಂದರ್ಭದಲ್ಲಿ ನೂತನವಾಗಿ ಬಿಡುಗಡೆಗೊಳಿಸಿದ ಬಟ್ಟೆಯ ಕೈಚೀಲಗಳನ್ನು ಸ್ವಾಮಿ ಏಕಗಮ್ಯಾನಂದಜಿ ವಿತರಿಸಿದ್ರು. ಶಿವರಾಂ ಅಡ್ಡೂರ್, ಸಮಾಜಸೇವಕಿ ಶ್ರದ್ಧಾ ಉಪಸ್ಥಿತರಿದ್ರು. ಅಭಿಯಾನದ ಪ್ರಮುಖ ದಿಲ್ ರಾಜ್ ಆಳ್ವ ಹಾಗೂ ಉಮಾನಾಥ್ ಕೋಟೆಕಾರ್ ಶ್ರಮದಾನದ ನೇತೃತ್ವ ವಹಿಸಿದ್ದರು.

Related posts

Leave a Reply

Your email address will not be published. Required fields are marked *