Header Ads
Breaking News

ರಾಷ್ಟ್ರೀಯ ಏಕತಾ ಶಿಬಿರ- 2020ರ ಸಮಾರೋಪ : ನಿಟ್ಟೆ ವಿ.ವಿಯಲ್ಲಿ ಏಳು ದಿನಗಳ ಕಾಲ ನಡೆದ ಶಿಬಿರ

ಉಳ್ಳಾ.ಲ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು ವತಿಯಿಂದ ದೇರಳಕಟ್ಟೆ ನಿಟ್ಟೆ ಪರಿಗಣಿತ ವಿ.ವಿಯಲ್ಲಿ ಏಳು ದಿನಗಳ ಕಾಲ ನಡೆದ ರಾಷ್ಟ್ರೀಯ ಏಕತಾ ಶಿಬಿರ- 2020 ಶಿಬಿರದ ಸಮಾರೋಪ ಸಮಾರಂಭ ಪಾನೀರು ಕ್ಯಾಂಪಸ್ಸಿನಲ್ಲಿ ಸೋಮವಾರ ನಡೆಯಿತು.

ಸಮಾರೋಪ ಸಮಾರಂಭಕ್ಕೆ ಮಂಗಳೂರು ಪೊಲೀಸ್  ಕಮೀಷನರ್ ಡಾ. ಹರ್ಷ ಪಿ.ಯಸ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸಂಪತ್ಭರಿತ ರಾಷ್ಟ್ರದಲ್ಲಿ ಯುವಜನ ಶಕ್ತಿಯಾಗಿದ್ದಾರೆ. ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಡಿಜಿಟಲೀಕರಣವಾಗುತ್ತಿರುವ ಭಾರತದ ಯಶಸ್ಸಿಗೆ ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡಿರುವ ಶಿಬಿರ ಸಹಕಾರಿ ಎಂದು ಅಭಿಪ್ರಾಯಪಟ್ಟರು.

2.5 ಲಕ್ಷದಷ್ಟು ಕಿ.ಮೀ ನ್ನು ಬೈಕಿನಲ್ಲೇ ಚಲಿಸಿ ಅರ್ಧದಷ್ಟು ದೇಶವನ್ನು ಸುತ್ತಿದ್ದೇನೆ. ಈ ಮೂಲಕ ದೇಶದ ಬಹುತೇಕ ವಿಚಾರಗಳನ್ನು ಅರಿತುಕೊಂಡಿರುವೆನು. ದೇಶದ ಕುರಿತ ಜ್ಞಾನ ಸಂಪಾದನೆಗೆ ಪ್ರಯಾಣಿ¸ಸುವ ಅಭ್ಯಾಸ ಮತ್ತು ದೇಶದಾದ್ಯಂತ ಎಲ್ಲರೂ ಒಟ್ಟು ಸೇರುವ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕಿದೆ. ರಾಷ್ಟ್ರೀಯತೆ ಪ್ರತಿಪಾದಿಸುವ ಶಿಕ್ಷಣ, ಸಮಾನತೆ, ಎಂತಹ ಸಂದರ್ಭವನ್ನು ಎದುರಿಸುವ ಧೈರ್ಯ ಎಲ್ಲರ ಒಗ್ಗೂಡುವಿಕೆ ಹಾಗೂ ಶಿಬಿರಗಳಿಂದ ಸಾಧ್ಯ ಎಂದರು. 

ಕಾರ್ಯಕ್ರಮದಲ್ಲಿ ನಿಟ್ಟೆ ವಿ.ವಿ ಉಪ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಮಾತನಾಡಿ ಶಿಬಿರದ ಮೂಲಕ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಬೇಕಿದೆ. ನಿತ್ಯ ಜೀವನದಲ್ಲಿ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ತೋರಿಸುವ ಮುಖೇನ ಸಮಾಜದ ಏಳಿಗೆಗೆ ಶ್ರಮಿಸುವುದರಿಂದ ಜೀವನದ ಯಶಸ್ಸು ಸಾಧ್ಯ ಎಂದರು.

ನಿಟ್ಟೆ ವಿ.ವಿ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ.ಎಂ.ಎಸ್ ಮೂಡಿತ್ತಾಯ, ನಿಟ್ಟೆ ವಿ.ವಿ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಸುಮಲತಾ ಆರ್ . ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *