Header Ads
Header Ads
Breaking News

ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾದ ಆಳ್ವಾಸ್ ಗಣರಾಜ್ಯೋತ್ಸವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ೭೦ನೇ ಗಣರಾಜ್ಯೋತ್ಸವದ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಾವಿರ ಕಂಠಗಳಲ್ಲಿ ಏಕತಾಗೀತೆ ಮೊಳಗಿತು. ತ್ರಿವರ್ಣದ ಮೆರುಗು ಎಲ್ಲರ ಗಮನ ಸೆಳೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅಥಿತಿಗಳಾಗಿ ಬ್ರೀಗೆಡಿಯರ್ ಬಿ.ವಿ ಪೂರ್ವಿಮಠ್ ಆಗಮಿಸಿದ್ದರು. ಬಳಿಕಧ್ವಜಾರೋಹಣವನ್ನು ನೆರವೇರಿಸಿದರು. ಆನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನು ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಿದರೆ ದೇಶ ಏಳಿಗೆಯ ಪಥ ಸುಲಭವಾಗುತ್ತದೆ.ವಿದ್ಯಾರ್ಥಿಗಳು ಕೂಡ ತಮಗೆ ಸಿಕ್ಕಿರುವ ಎಲ್ಲಾ ಅವಕಾಶಗಳನ್ನು ಕ್ರಿಯಾಶೀಲತೆಯಿಂದ ಬಳಸಿಕೊಂಡು ದೇಶದ ಅಭಿವೃದ್ಧಿ ಪಣತೊಡಬೇಕು ಎಂದರು.ಆಕರ್ಷಕ ಪಥಸಂಚಲನ
ಈ ಬಾರಿಯ ಆಳ್ವಾಸ್ ಗಣರಾಜ್ಯೋತ್ಸವದ ಮುಖ್ಯ ವಿಶೇಷತೆಎಂದರೆ ಎನ್‌ಸಿಸಿ ಕೆಡೆಟ್‌ಗಳ ಪಥ ಸಂಚಲನ. ಕರ್ನಾಟಕದ ವಿವಿಧ ಕಾಲೇಜುಗಳ ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್ ವಿಂಗ್‌ಗಳಿಗೆ ಸೇರಿದ ಸುಮಾರು 2,200 ಕೆಡೆಟ್‌ಗಳು ಶಿಸ್ತಿನ ಹೆಜ್ಜೆ ಹಾಕಿದರು. ಜೊತೆಗೆ 400 ರೋವರ್‍ಸ್-ರೇಂಜರ್‍ಸ್ ಹಾಗೂ ಸ್ಕೌಟ್ಸ್-ಗೈಡ್ಸ್‌ವಿದ್ಯಾರ್ಥಿಗಳು ಪಥಸಂಚಲನದಲ್ಲಿದ್ದರು. ಸುಮಾರು 20 ನಿಮಿಷಗಳಕಾಲ ನಡೆದ ಈ ಮಾರ್ಚ್‌ಪಾಸ್ಟ್‌ಗಣರಾಜ್ಯೋತ್ಸವಕ್ಕೆ ಶಿಸ್ತಿನ ಚೌಕಟ್ಟು ನೀಡಿತ್ತು. ಈ ಪಥಸಂಚಲನಕ್ಕೆ ಹೊನ್ನಾವರದ ಮದರ್‌ತೆರೆಸಾ ಬ್ಯಾಂಡ್ ಸಾಥ್ ನೀಡಿತ್ತು. ಆಳ್ವಾಸ್ ಗಣರಾಜೋತ್ಸವದಲ್ಲಿ ಭಾರತೀಯ ಸೇನೆಯ ಸುಮಾರು 300 ಎಕ್ಸ್‌ಸರ್ವೀಸ್‌ಮೆನ್‌ಕಾರ್ಯಕ್ರಮದಕೇಂದ್ರಬಿಂದುವಾಗಿದ್ದರು. ಎನ್‌ಸಿಸಿ ಬೆಟಾಲಿಯನ್‌ಗಳ ಕ್ಯಾಪ್ಟನ್‌ಗಳು ಕೂಡ ಕಾರ್ಯಕ್ರಮದಲ್ಲಿದ್ದರು.ಸಾವಿರ ಕಂಠಗಳಲ್ಲಿ ಮೊಳಗಿದ ಏಕತಾಗೀತೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಎಲ್ಲಾ ವಿದ್ಯಾರ್ಥಿಗಳು, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿಶೇಷ ಆಹ್ವಾನಿತರು, ಮೂಡುಬಿದಿರೆಯ ಸಾರ್ವಜನಿಕರು ಸೇರಿದಂತೆ 33000 ಜನರು ಆಳ್ವಾಸ್ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು.ಮುಖ್ಯ ಅತಿಥಿಗಳ ಭಾಷಣದ ನಂತರ ಹಾಡಿದ’ಕೋಟಿಕಂಠೋ ಸೆ’ಏಕತಾ ಹಾಡಿಗೆ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹ ದನಿಗೂಡಿಸಿದ್ದು ರೋಮಾಂಚನ ನೀಡುವಂತಿತ್ತು.ಏಕತಾಗೀತೆಯ ಸಮಯದಲ್ಲಿಯೇ ವಿದ್ಯಾರ್ಥಿಗಳೆಲ್ಲರೂ ತ್ರಿವರ್ಣಧ್ವಜವನ್ನು ಹಾಡಿನ ತಾಳಕ್ಕೆ ಲಯಬದ್ಧವಾಗಿ ಬೀಸಿದ್ದು ವಿಶೇಷವಾಗಿತ್ತು.ತ್ರಿವರ್ಣದ ಮೆರುಗು
ನೆರೆದಿದ್ದ ಸಮೂಹವೆಲ್ಲ ಹಿಡಿದಿದ್ದ ಭಾರತದಧ್ವಜ,ತ್ರಿವರ್ಣ ಬಣ್ಣದಟೀ-ಶರ್ಟ್ ಧರಿಸಿದ್ದ 2405 ವಿದ್ಯಾರ್ಥಿಗಳು ಮಾಡಿದ್ದ ‘ಇಂಡಿಯಾ’ ಫಾರ್ಮೇಶನ್, ತ್ರಿವರ್ಣದ ಕೊಡೆಗಳು, ತ್ರಿವರ್ಣದ ಬೆಲೂನ್‌ಗಳಿದ್ದು ಇಡೀ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಗೆ ಕೇಸರಿ, ಬಿಳಿ, ಹಸಿರಿನ ಮೆರುಗು ನೀಡಿತ್ತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಅಧ್ಯಕ್ಷಡಾ.ಎಂ.ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ವಿನಯ್ ಆಳ್ವ, ಮೀನಾಕ್ಷಿ ಜಯಕರ್ ಆಳ್ವ, ಹನಾ ವಿನಯ್ ಆಳ್ವ, ಕರ್ನಲ್ ಅನಿಲ್ ನೌಟಿಯಲ್, ಕರ್ನಲ್ ಮನೋಜ್, ಕರ್ನಲ್ ಗ್ರೇಸಿಯನ್ ಸಿಕ್ವೇರ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಡಾ.ರಾಜೇಶ್, ಫ್ಲೈಯಿಂಗ್ ಆಫೀಸರ್ ಪರ್ವೆಜ್, ಉಪಸ್ಥಿತರಿದ್ದರು.

Related posts

Leave a Reply