Header Ads
Header Ads
Header Ads
Breaking News

ರೋಟರಿ ಕ್ಲಬ್ ಮಂಗಳೂರು ಸೌತ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ : ಜ್ಯೋತಿ ಸರ್ಕಲ್‌ನ ಬಲ್ಮಠದಲ್ಲಿ ನೀರಿನ ಘಟಕದ ಉದ್ಘಾಟನೆ ಕಾರ್ಯಕ್ರಮ

ರೋಟರಿ ಕ್ಲಬ್ ಮಂಗಳೂರು ಸೌತ್ ವತಿಯಿಂದ ಮಂಗಳೂರಿನ ಜ್ಯೋತಿ ಸರ್ಕಲ್‌ನ ಬಲ್ಮಠದಲ್ಲಿ ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಲೇಜ್ ಬಲ್ಮಠದ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮ ಹಾಗೂ ರಸ್ತೆ ನಿಯಮದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವಂತಹಾ ರೋಟರಿ ಕ್ಲಬ್ ಮಂಗಳೂರು ಸೌತ್ ವತಿಯಿಂದ ಮಂಗಳೂರಿನ ಜ್ಯೋತಿ ಸರ್ಕಲ್‌ನ ಬಲ್ಮಠದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ರೋಟರಿ ಕ್ಲಬ್ ಡಿಸ್ಟಿಕ್ ಗರ್ವನರ್ ಮೇಜರ್ ಡೊನರ್ ಜೋಸೆಫ್ ಮ್ಯಾಥ್ಯೂ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಕುಡಿಯುವ ನೀರಿನ ಘಟಕವು ಅನೇಕ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಅಷ್ಟೇ ಅಲ್ಲದೇ ನೀರು ಪ್ರತಿಯೊಬ್ಬರಿಗೂ ಅತೀ ಮೂಖ್ಯವಾಗಿದೆ. ನೀರನ್ನು ಹಿತ-ಮಿತವಾಗಿ ಬಳಸಬೇಕು ಎಂದರು.
ಬಳಿಕ ಮಾತನಾಡಿದ ಟ್ರಾಫಿಲ್ ಎ.ಸಿ.ಪಿ ಮಂಜುನಾಥ್ ಶೆಟ್ಟಿ ಮಾತನಾಡಿ ನೀರಿನ ಸಂರಕ್ಷಣೆಯು ನಮ್ಮೆಲ್ಲಾರ ಕರ್ತವ್ಯವಾಗಿದೆ,ನೀರು ಮತ್ತು ಗಾಳಿ ಮಾನವನಿಗೆ ಮುಖ್ಯವಾಗಿದೆ ಆಷ್ಟೇ ಅಲ್ಲದೆ ವಾಹನ ಚಲಾಯಿಸು ಸಂಧರ್ಭದಲ್ಲಿ ಮೊಬೈಲ್ ಬಳಕೆಯನ್ನು ಮಾಡಬೇಡಿ ಎಂದು ತಿಳಿಸಿದ್ರು.
ಬಳಿಕ ಬಲ್ಮಠ ಸರಕಾರಿ ಮಹಿಳಾ ಪಿ.ಯು ಕಾಲೇಜ್‌ನ ವಿದ್ಯಾರ್ಥಿನಿಯರಿಂದ ಟ್ರಾಫಿಕ್ ಅವೇರ್‍ನೆಸ್ ಕಾರ್ಯಕ್ರಮವು ನಡೆಯಿತು ಈ ಸಂರ್ಭದಲ್ಲಿ ಮಾತನಾಡಿದ ಟ್ರಾಫಿಕ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್ ಮಾತನಾಡಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಈ ವೇಳೆ ಬಲ್ಮಠ ಸರಕಾರಿ ಮಹಿಳಾ ಪಿ.ಯು ಕಾಲೇಜ್‌ನ ಪ್ರಾಂಶುಪಾಲರಾದ ಮರಿಯೆಟ್ಟಿ ಜೆ ಮಸ್ಕರೆನ್ಹಾಸ್, ಪಬ್ಲಿಕ್‌ಇಮೇಜ್ ಚೇರ್‌ಮೇನ್ ಸತೀಶ್ ಬೊಳಾರ್, ರೋಟರಿ ಕ್ಲಬ್‌ನ ಸದಸ್ಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *