Header Ads
Breaking News

ಲಾಕ್ ಡೌನ್ ಸಮಯ ಭತ್ತದ ಕೊಯ್ಲಿಗೆ ಸದುಪಯೋಗ : ಮಾದರಿಯಾದ ಫ್ರೆಂಡ್ಸ್ ಕೂಳೂರು ಗ್ರಂಥಾಲಯದ ಸದಸ್ಯರು

ಮಂಜೇಶ್ವರ : ಯುವ ಜನತೆ ಕೃಷಿ ಚಟುವಟಿಕೆಯತ್ತ ಆಕರ್ಷಿತರಾಗಿ ಈ ಕೆಲಸ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೊಂದು ಇಲ್ಲಿದೆ.ಹಳ್ಳಿಗರಲ್ಲಿ ಕೃಷಿಯ ಬಗ್ಗೆ ಅಪವಾದ ಏನಿದ್ದರೂ ಅದು ಯುವಜನತೆಯನ್ನು ದೂರುವುದು ಮೊದಲ ಪರಿಪಾಠವಾಗಿದೆ. ಆದರೆ ಈ ಲಾಕ್ ಡೌನ್ ಕಾಲದಲ್ಲಿ ಉಪ್ಪಳ ಸಮೀಪದ ಕೂಳೂರು ಎಂಬಲ್ಲಿನ ಫ್ರೆಂಡ್ಸ್ ಗಳು ಒಟ್ಟಾಗಿ ಸೇರಿ ಮಾಡಿದ ಭತ್ತದ ಕೊಯ್ಲಿನ ಕೆಲಸವು ನಾಡಿಗೆ ಮಾದರಿಯಾಗಿದೆ.ಕೋರೊನ ಎಂಬ ಮಹಾಮಾರಿ ದೇಶವನ್ನೇ ಲಾಕ್ ಮಾಡಿ ಮನೆಯೊಳಗೆ ಕುಳ್ಳಿರಿಸಿದ ಕಾಲದಲ್ಲಿ ” ಯುವಜನತೆಯು ಕೃಷಿ ಕಾರ್ಯಗಳಿಗೆ ಇಳಿಯಬೇಕು ” ಎಂಬ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ಮಾತುಗಳಿಂದ ಸ್ಫೂರ್ತಿ ಪಡೆದ ಕೂಳೂರಿನ ಫ್ರೆಂಡ್ಸ್ ಗ್ರಂಥಾಲಯದ ಸದಸ್ಯರು ಒಟ್ಟಾಗಿ ಈ ಮಹತ್ತರವಾದ ಕಾರ್ಯಕ್ಕೆ ನಡೆಸಿದ್ದಾರೆ. ಇದರಂತೆ ಕೋರೋನಾ ಕಾಲದಲ್ಲಿ ಭತ್ತದ ಕೊಯ್ಲಿಗೆ ಕೆಲಸದಾಳುಗಳು ಸಿಗದೆ ಪರದಾಡುವ ತಮ್ಮ ನಾಡಿನ ರೈತಾಪಿ ವರ್ಗಕ್ಕೆ ಸಹಕಾರವಾಗುವ ನಿಟ್ಟಿನಲ್ಲಿ ಈ ಯುವಕರು ಗದ್ದೆಗಿಳಿದು ಕೊಯ್ಲು ನಡೆಸಿದರು.

ಇದೀಗ ಗ್ರಂಥಾಲಯದ ಸದಸ್ಯರಾದ ಸುಬ್ಬಣ್ಣ ಆಳ್ವ ಕರಿಪ್ಪಾರ್, ಮಹಾಬಲ ಶೆಟ್ಟಿ ಚಾರ್ಲ, ಮಾರ್ಗದರ್ಶಕರಾದ ಬಾಳಪ್ಪ ಬಂಗೇರ ರವರ ಗದ್ದೆಯಲ್ಲಿ ಕೊಯ್ಲು ಕೆಲಸದಲ್ಲಿ ತೊಡಗಿದರು. ಇದನ್ನು ನೋಡಿದ ಊರವರು ತಮ್ಮ ಗದ್ದೆಯ ಕೊಯ್ಲುಗೂ ಸಹಕರಿಸುವಂತೆ ಮನವಿ ಮಾಡಿರುವುದರಿಂದ ಊರಿನ ಭತ್ತದ ಕೊಯ್ಲನ್ನು ಯಶಸ್ವಿಯಾಗಿ ಮುಗಿಸಬೇಕೆಂಬ ಹಂಬಲ ಇವರದ್ದಾಗಿದೆ.ಕೃಷಿ ಕಾಯಕಕ್ಕೆ ಜನ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣವೊಡ್ಡಿ ಹಿಂಜರಿಯುವ ಕೃಷಿಕರಿಗೆ ಕೂಳೂರಿನ ಈ ಯುವಕರ ಪರಿಶ್ರಮದಿಂದ ಕುಳಿತು ಉಣ್ಣುವ ಅನ್ನದ ಅಕ್ಕಿ ಸಿಕ್ಕಿದೆ. ಗ್ರಾಮೀಣ ಪ್ರದೇಶದ ಗ್ರಂಥಾಲಯವೊಂದರ ಈ ರೀತಿಯ ಚಟುವಟಿಕೆ ” ಕೃಷಿಯೇ ದೇಶದ ಬೆನ್ನೆಲುಬು ” ಎಂಬ ಮಾತಿಗೆ ಪ್ರೇರಣೆಯಾಗಿದೆ.

Related posts

Leave a Reply

Your email address will not be published. Required fields are marked *