Header Ads
Header Ads
Breaking News

ವರ್ಷಕ್ಕೊಮ್ಮೆ ಉಡುಪಿ ಕೃಷ್ಣ ಕಣ್ಮರೆ..! ಅಷ್ಟಮಠಾಧೀಶರು ಕೃಷ್ಣನನ್ನು ಬುಟ್ಟಿಯಲ್ಲಿ ಬಚ್ಚಿಡುವ್ಯುದ್ಯಾಕೆ?

ಪ್ರತಿದಿನವೂ ಭಕ್ತರಿಗೆ ದರ್ಶನ ನೀಡುವ ಉಡುಪಿಯ ಕೃಷ್ಣ ದೇವರು ವರ್ಷದಲ್ಲೊಮ್ಮೆ ಕಣ್ಮರೆಯಾಗುತ್ತಾರೆ ಗೊತ್ತಾ? ಗರ್ಭಗುಡಿಯೊಳಗೆ, ಮುಚ್ಚಿದ ಬಿದಿರಿನ ಬುಟ್ಟಿಯಲ್ಲಿ ಅಡಗಿ ಕೂರುವ ಕೃಷ್ಣನನ್ನು ನೋಡೋದೇ ಒಂದು ಅಪೂರ್ವ ಸನ್ನಿವೇಶ! ಅಷ್ಟಮಠಾಧೀಶರ ’ಕಣ್ಮಣಿ ಕೃಷ್ಣ’ ವರ್ಷಕ್ಕೊಮ್ಮೆ ಮಾಯವಾಗುವ ಪೂಜಾ ವಿಶೇಷವನ್ನೊಮ್ಮೆ ನೋಡಿ. ನವಗ್ರಹ ಕಿಂಡಿಯಿಂದ ಕೃಷ್ಣನ ದರ್ಶನ ಮಾಡಲು ಬಂದರೆ, ಅಕೋ ಇಲ್ಲಿ ನೋಡಿ, ಭಕ್ತರ ಕಣ್ಮಣಿ ಕೃಷ್ಣ, ಬಿದಿರಿನ ಬುಟ್ಟಿಯೊಳಗೆ ಅವಿತು ಕುಳಿತಿದ್ದಾನೆ. ಕಡಗೋಲು ಹಿಡಿದ ಬಾಲಕೃಷ್ಣ ನಂದಗೋಕುಲದಲ್ಲಿ ನಾನಾ ಚಮತ್ಕಾರಗಳನ್ನು ತೋರಿಸಿದ್ದಾನೆ. ಉಡುಪಿಯಲ್ಲೂ ವರ್ಷಕ್ಕೊಮ್ಮೆ ಕೃಷ್ಣ ಮಾಯವಾಗುವ ಸಂದರ್ಭ ಎದುರಾಗುತ್ತೆ, ಆದರೆ ಇಲ್ಲಿ ಯಾವುದೇ ಚಮತ್ಕಾರ, ಮಾಯಾಜಾಲವಿಲ್ಲ. ಬದಲಿಗೆ ಪರ್ಯಾಯ ಮಠಾಧೀಶರೇ ಕೆಲಹೊತ್ತುಗಳ ಕಾಲ ಕೃಷ್ಣ ದೇವರನ್ನು ಬುಟ್ಟಿಯೊಳಿಗೆ ಮುಚ್ಚಿಡುತ್ತಾರೆ. ಯಾಕೆ ಹೀಗೆ ಮಾಡುತ್ತಾರೆ ಎಂಬ ಕುತೂಹಲವೇ? ಹಾಗಾದ್ರೆ ಇಲ್ಲಿ ನೋಡಿ. ತಯಲೆ ಮೇಲೆ ಬಾಳೆಯ ಎಲೆಯ ಟೊಪ್ಪಿ ಧರಿಸಿ, ಕೈಯ್ಯಲ್ಲಿ ತೆಂಗಿನ ಗರಿಯ ಪೊರಕೆ ಹಿಡಿದು ಸ್ವಚ್ಛತಾ ಸೇನಾನಿಗಳಂತೆ ಕಾಣುವವರು ಬೇರ್ಯಾರೂ ಅಲ್ಲ, ಉಡುಪಿಯ ಅಷ್ಟಮಠಾಧೀಶರು. ಹೌದು ವರ್ಷಕೊಮ್ಮೆ ಕೃಷ್ಣಮಠದ ಸ್ವಚ್ಛತಾ ಕಾರ್ಯ ನಡೆಯುತ್ತೆ. ಇದೇನೂ ಇಂದು ನಿನ್ನೆಯ ಆಚರಣೆಯಲ್ಲ, ಬದಲಿಗೆ ಶತಮಾನಗಳಿಂದ ನಡೆದು ಬಂದ ಅಪರೂಪದ ಒಂದು ಪದ್ಧತಿ. ಈ ಆಚರಣೆಗೆ ಉದ್ವರ್ತನ ಸೇವೆ ಎಂದು ಕರೆಯುತ್ತಾರೆ. ಸ್ವಚ್ಛ ಭಾರತದ ಕಲ್ಪನೆಗೆ ಇಂತಹಾ ಪಾರಂಪರಿಕ ಆಚರಣೆಗಳೇ ಸ್ಪೂರ್ತಿ ಅಂದರೂ ತಪ್ಪಲ್ಲ.

ಕೃಷ್ಣ ದೇವರಿಗೆ ದಿನವೂ 14 ಬಗೆಯ ಪೂಜೆ ನಡೆಯುತ್ತೆ, ನೂರಾರು ಮಂಗಳಾರತಿ ಬೆಳಗಲಾಗುತ್ತೆ. ಎಂದೂ ಆರದ ನಂದಾದೀಪ ಗರ್ಭಗುಡಿಯಲ್ಲೇ ಇರುತ್ತೆ. ಈ ದೀಪದ ಮಸಿ, ಪೂಜೆ ನೈರ್ಮಲ್ಯ ಎಲ್ಲವನ್ನೂ ಶುದ್ಧಗೊಳಿಸೋದು ಈ ಆಚರಣೆಯ ಉದ್ದೇಶ. ಸ್ವತ: ಮಠಾಧೀಶರೇ ಕೃಷ್ಣಮಠದ ಗರ್ಭಗುಡಿಯ ಸುತ್ತಲು ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಸ್ವಚ್ಛತಾಕಾರ್ಯ ನಡೆಯುವ ವೇಳೆ ಕೃಷ್ಣ ದೇವರನ್ನು ಬುಟ್ಟಿಯೊಳಗೆ ಹುದುಗಿಸಿಡುತ್ತಾರೆ. ದಿನವೂ ಮಠದ ಸ್ವಚ್ಛತೆ ನಡೆದರೂ ಸ್ವತ: ಸ್ವಾಮೀಜಿಗಳೇ ವರ್ಷಕ್ಕೊಮ್ಮೆ ಸ್ವಚ್ಛತಾಕಾರ್ಯ ನಡೆಸೋದು ಉಡುಪಿಯ ಕೃಷ್ಣಮಠದ ಆಚರಣಾ ವಿಶೇಷ. ಮಠದ ಸ್ವಚ್ಛತೆ ನಡೆದ ನಂತರ ಕೃಷ್ಣ ದೇವರ ಸಹಿತ ಮಠದೊಳಗಿರುವ ನೂರಾರು ವಿಗ್ರಹಳಿಗೆ ಅಭಿಷೇಕವನ್ನೂ ನಡೆಸಲಾಗುತ್ತೆ. ಮಳೆಗಾಲದ ಆರಂಭದಲ್ಲಿ ಅಂದರೆ ಚಾತುರ್ಮಾಸ್ಯ ಪ್ರಾರಂಭಕ್ಕೆ ಮುನ್ನ ಈ ಅಪರೂಪದ ಆಚರಣೆ ನಡೆಸಲಾಗುತ್ತೆ.

ಪ್ರಧಾನಿ ನರೇಂದ್ರ ಮೋದಿ ಸ್ವಚ್ಛಭಾರತದ ಹೆಸರಲ್ಲಿ ಅಭಿಯಾನಕ್ಕೆ ಚಾಲನೆ ಕೊಟ್ಟ ನಂತರ ನಮ್ಮ ಸ್ವಚ್ಛತಾ ಪ್ರ???? ಹೆಚ್ಚಿದೆ. ದೇವರ ಹೆಸರಲ್ಲಿ ನಡೆಯುವ ಈ ಪಾರಂಪರಿಕ ಸ್ವಚ್ಛತಾಕಾರ್ಯ ನಿಜಕ್ಕೂ ಸಾಮಾಜಿಕ ಜಾಗೃತಿಯ ಕಾಳಜಿಯನ್ನೂ ಒಳಗೊಂಡಿರುವುದು ವಿಶೇಷ.

Related posts

Leave a Reply

Your email address will not be published. Required fields are marked *