Header Ads
Header Ads
Breaking News

ವಿಟ್ಲದಲ್ಲಿ ಇನ್ನೂ ಮುಗಿಯದ ದಲಿತ ಸಂಘಟನೆಗಳ ಒಳಜಗಳ

ವಿಟ್ಲ: ಅಂಬೇಡ್ಕರ್ ತತ್ವ ರಕ್ಷಣಾ ತತ್ವ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕರು ವಿಟ್ಲದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರನ್ನು ಎಳೆದು ತಂದು ನಿಲ್ಲಿಸುವ ತಾಕತ್ತು ನಮಗಿದೆ ಎಂದು ನೀಡಿದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ವಿಟ್ಲದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್ ಎಂದು ತಿಳಿಸಿದ್ದಾರೆ.ಅವರು ಗುರುವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅವರು ಪುತ್ತೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅಂಬೇಡ್ಕರ್ ತತ್ವ ವೇದಿಕೆ ರಾಜ್ಯಾಧ್ಯಕ್ಷರು ಈ ರೀತಿ ಮಾತನಾಡಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಅವರು ದಲಿತರೊಳಗೆ ದಲಿತರನ್ನೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದು ಇಂತಹ ಮಾತನ್ನು ಖಂಡಿಸುವುದರ ಜತೆಗೆ ಇಂತ ಹೇಳಿಕೆ ನೀಡಿದರೆ ನಮ್ಮ ಸಂಘಟನೆಯ ಜಿಲ್ಲಾಧ್ಯಕ್ಷರಿಗೂ ಅವರನ್ನು ಎಳೆದು ತಂದು ನಿಲ್ಲಿಸುವ ತಾಕತ್ತಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ, ಸಂಚಾಲಕ ಗೋಪಾಲ್ ನೇರಳಕಟ್ಟೆ, ಗೌರವ ಸಲಹೆಗಾರ ಮೋಹನ್‌ದಾಸ್, ಮಾಣಿ ಗ್ರಾಮ ಶಾಖೆಯ ಉಪಾಧ್ಯಕ್ಷ ಡಿ.ಬಿ.ಆನಂದ ಹಳೀರ ಅವರು ಉಪಸ್ಥಿತರಿದ್ದರು.

Related posts

Leave a Reply