

ವಿಟ್ಲ ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ಗೆ ಕಳ್ಳರು ನುಗ್ಗಿ ಕಳವುಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಬಂಕ್ನ ಕಚೇರಿಯ ಬೀಗ ಒಡೆದು ನುಗ್ಗಿದ ದರೋಡೆ ಕೋರರು ಕಂಪ್ಯೂಟರ್ ಮತ್ತು ಸಿಸಿ ಕ್ಯಾಮೆರಾ ಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದಾರೆ.ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿರುತ್ತಾರೆ. ಸುಮಾರು 2 ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಿಟ್ಲ ಪೊಲೀಸ್ರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬಂಕ್ ನಲ್ಲಿ ಹೆಚ್ಚಿನ ಮೊತ್ತದ ಹಣವಿರಬಹುದು ಎಂಬ ಯೋಜನೆಯೊಂದಿಗೆ ದರೋಡೆಕೋರರು ನುಗ್ಗಿರುತ್ತಾರೆ. ಎಷ್ಟು ಮೊತ್ತದ ನಗದನ್ನು ದೋಚಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಷ್ಟೆ . ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ ಎಸ್ಸಾರ್ ಕಂಪನಿಯ ಬಂಕ್ ಗೆ ಕಳ್ಳರು ನುಗ್ಗಿದ್ದರು.