Header Ads
Breaking News

ವಿಟ್ಲದ ಸರ್ಕಾರಿ ಶಾಲೆಯಲ್ಲಿ ನೆರೆ ಸಂತ್ರಸ್ತರ ಸಹಾಯನಿಧಿ ಪ್ರಯುಕ್ತ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ

 ಬಂಟ್ವಾಳ ತಾಲ್ಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ವಿಟ್ಲ ವಲಯದ ಆಶ್ರಯದಲ್ಲಿ ನೆರೆ ಸಂತ್ರಸ್ತರ ಸಹಾಯನಿಧಿ ಪ್ರಯುಕ್ತ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟಗಳನ್ನೂಳಗೊಂಡ ದಸರಾ ಕ್ರೀಡೋತ್ಸವ ವಿಟ್ಲದ ಸರ್ಕಾರಿ ಶಾಲೆಯ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ಮಾನವೀಯತೆ ಕಾರ್ಯಕ್ಕಾಗಿ ಕಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಅಶಕ್ತರಿಗೆ ಸಹಾಯ ಮಾಡುವುದೇ ನಿಜವಾದ ಸಮಾಜ ಸೇವೆಯಾಗಿದೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಟ್ಲ ಸರ್ಕಾರಿ ಶಾಲೆಯ ಗೌರವಾಧ್ಯಕ್ಷ ಸುಬ್ರಾಯ ಪೈ ಅವರು ಒಂದು ಕಾರ್ಯಕ್ರಮ ಯಶಸ್ವಿಗೊಳ್ಳಲು ಧ್ವನಿ ಹಾಗೂ ಬೆಳಕು ಮುಖ್ಯ ಪಾತ್ರ ವಹಿಸುತ್ತದೆ. ಸ್ವತಃ ಅವರೇ ಕಾರ್ಯಕ್ರಮ ಆಯೋಜಿಸಿದರೆ ಈ ಕಾರ್ಯಕ್ರಮ ಯಶಸ್ವಿಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಬಡ್ಡಿಯಲ್ಲಿ ಸಾಯಿ ಟೌನ್ ಕಿಚನ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮನ್ಸೂರು ಫ್ರೆಂಡ್ಸ್ ಮುಂಬೈ ದ್ವಿತೀಯ ಸ್ಥಾನ ಪಡೆದುಕೊಂಡರೆ, ಪಿಂಕಿ ಪೂಂಜ ಸಿದ್ಧಕಟ್ಟೆ ಹಾಗೂ ಪಟ್ಲ ಫ್ರೆಂಡ್ಸ್ ಕಲ್ಲೇಗ ತೃತೀಯ ಹಾಗೂ ಚತುರ್ಥ ಪ್ರಶಸ್ತಿ ಪಡೆದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿ, ಬಂಟ್ವಾಳ ತಾಲ್ಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ಶೇಖ್ ಸುಭಾನ್ ಮುನ್ನ ಮಂಗಳಪದವು, ಗೌರವ ಸಲಹೆಗಾರ ಧನ್‌ರಾಜ್ ಶೆಟ್ಟಿ, ವಿಟ್ಲ ಮೆಸ್ಕಾಂ ಕಿರಿಯ ಎಂಜಿನಿಯರ್ ಸತೀಶ್ ಸಫಲ್ಯ, ಉದ್ಯಮಿ ಸದಾಶಿವ ಆಚಾರ್ಯ, ವಿಟ್ಲ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ವಿಟ್ಲ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ವಿಟ್ಲ ಹಿಂದೂ ಯುವ ಸೇನೆ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *