Header Ads
Breaking News

ವಿದ್ಯಾರ್ಥಿಗಳ ಪ್ರತಿಭೆಗಳಿಗೆ ವೇದಿಕೆಯಾದ ವಿಜ್ಞಾನ ಮೇಳ

ಮಂಜೇಶ್ವರ: ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಮಂಜೇಶ್ವರದ ಪಾವುರು ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಡಾನ್ ಬೋಸ್ಕೋ ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳವನ್ನು ಆಯೋಜಿಸಲಾಯಿತು. ಪ್ರೊಫೆಸರ್ ಕುಸುಮಮ್ ಅಗಸ್ಟಿನ್ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿದರುಶಾಲಾ ವಿದ್ಯಾರ್ಥಿಗಳು ವಿವಿಧ ರೀತಿಯ ಉಪಕರಣಗಳನ್ನು ಹಾಗೂ ಇನ್ನಿತರ ಸಾಮಾಗ್ರಿಗಳನ್ನು ತಯಾರಿಸಿ ಪೋಷಕರಿಗೆ ಪ್ರದರ್ಶಿಸಿ ಅಧ್ಯಾಪಕರುಗಳಿಂದ ಕಲಿತ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳ ವಿಜ್ಞಾನ ಮೇಳವನ್ನು ವೀಕ್ಷಿಸಲು ಶಾಲಾ ಮಕ್ಕಳ ಹೆತ್ತವರು ಹಾಗೂ ಊರವರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳಿಂದ ವಿವರಣೆಯನ್ನು ಪಡೆದರು.ಜ್ಞಾನದ ಜೊತೆಗೆ ವಿಜ್ಞಾನವೂ ಬೇಕು ಅಂತೆಯೇ ವಿಜ್ಞಾನಕ್ಕೆ ಜ್ಞಾನದ ಆವಶ್ಯಕತೆ ಇದೆ. ಇದರ ಜೊತೆಗೆ ವಿಜ್ಞಾನ ಮತ್ತು ಧರ್ಮ, ವಿಜ್ಞಾನ ಮತ್ತು ಸಮಾಜ, ವಿಜ್ಞಾನ ಮತ್ತು ಅಧ್ಯಾತ್ಮ, ಪ್ರಸಕ್ತ ವಿಜ್ಞಾನ ಹಾಗೂ ಪುರಾತನ ವೇದ ? ಉಪನಿಷತ್ತುಗಳ ಪರಿಕಲ್ಪನೆಯ ವಿಜ್ಞಾನ ಇವುಗಳ ಸಮ್ಮಿಲನವಗಿರುವುದಾಗಿಯೂ ಇದನ್ನು ತಮ್ಮ ವಿದ್ಯೆಯೊಂದಿಗೆ ಅಳವಡಿಸಿ ವಿದ್ಯಾರ್ಥಿಗಳನ್ನು ಇನ್ನಷ್ಟು ಉತ್ತಮ ಹಾದಿಯತ್ತ ಕೊಂಡೊಯ್ಯುವ ಉದ್ದೇಶದಿಂದ ವಿಜ್ಞಾನ ಮೆಳವನ್ನು ಹಮ್ಮಿಕೊಂಡಿರುವುದಾಗಿ ಸದ್ರಿ ಶಾಲೆಯ ಮ್ಯಾನೇಜರ್ ವಂದನೀಯ ಗುರು ಫಾದರ್ ಅಗಸ್ಟಿನ್ ಹೇಳಿದರು.ವಿಜ್ಞಾನ, ಸಮಾಜ, ಗಣಿತ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಮಾಗ್ರಿ, ಯಂತ್ರೋಪಕರಣಗಳನ್ನು ತಯಾರಿಸಿದ್ದರು.ಅಧ್ಯಾಪಕರುಗಳಾದ ಚಂದ್ರಶೇಖರ, ದೀಕ್ಷಿತಾ, ಕ್ಲಾರಾ ವೀಣಾ, ಸಿಸ್ಟರ್ ಆಶಾ, ವೀಣಾ ಟೀಚರ್ ಮೊದಲಾದವರು ಮುಂದಾಳತ್ವ ನೀಡಿದರು.

Related posts

Leave a Reply