Header Ads
Header Ads
Breaking News

ವಿಶ್ವ ಆಂಬುಲೆನ್ಸ್ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆಯ ವತಿಯಿಂದ ಅಭಿಯಾನ

ವಿಶ್ವ ಆಂಬುಲೆನ್ಸ್ ದಿನದ ಅಂಗವಾಗಿ ನಿವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು ಎಂಬ ಅಭಿಯಾನವನ್ನು ಕೆಎಂಸಿ ಆಸ್ಪತ್ರೆಯವರು ಆಯೋಜಿಸಿದ್ದಾರೆ. ಜೀವ ಉಳಿಸುವ ತಂತ್ರಗಳಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಕಾರ್ಯಕ್ರಮ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ತರಬೇತಿ ನೀಡುವ ಗುರಿ ಹೊಂದಿರುವ ಅಭಿಯಾನ ಸಾಮಾನ್ಯ ಸಾರ್ವಜನಿಕರಿಗೆ ಸಿಪಿಆರ್ ನಂತಹ ಉಳಿಸುವ ತಂತ್ರಗಳಲ್ಲಿ ತರಬೇತಿ ನೀಡಲಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದಿಕ್ಕಿ ಅವರು, ಜೀವ ಉಳಿಸಬಹುದಾದ ಸುವರ್ಣಗಂಟೆ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಮತ್ತು ಪ್ರೋತ್ಸಾಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು ಎಷ್ಟು ಅಗತ್ಯ ಎಂಬುದನ್ನು ಅವರಿಗೆ ತಿಳಿಸಲಾಗುತ್ತದೆ. ಇದಕ್ಕಾಗಿಯೇ ಮಣಿಪಾಲ್ ಆಸ್ಪತ್ರೆ ಸಾರ್ವಜನಿಕರಿಗೆ ಸಿಪಿಆರ್ ನಂತಹ ಜೀವ ಉಳಿಸುವ ತಂತ್ರಗಳ ಬಳಕೆಯಲ್ಲಿ ತರಬೇತಿ ನೀಡಲಿದೆ ಎಂದು ಹೇಳಿದರು.
ಆನಂತರ ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಶೇಷತಜ್ಞರಾದ ಡಾ. ಜೀದು ರಾಧಾಕೃಷ್ಣನ್ ಮಾತನಾಡಿ, ಜೀವನದಲ್ಲಿ ಕೆಲವು ಸ್ಥಿತಿಗಳಲ್ಲಿ ತಕ್ಷಣ ವೈದ್ಯಕೀಯ ಆರೈಕೆಯಲ್ಲಿ ಅಗತ್ಯವಿರುತ್ತದೆ. ಕ್ಷಣಾರ್ಧದಲ್ಲಿ ವಿಳಂಬವೂ ಕೂಡ ಒಬ್ಬರ ಜೀವವನ್ನು ಉಳಿಸುವಲ್ಲಿ ತೀವ್ರ ರೀತಿಯಲ್ಲಿ ಬದಲಿಸಬಲ್ಲದು. ಆಂಬುಲೆನ್ಸ್ ಗಳ ಪ್ರಾಮುಖ್ಯತೆ ಮತ್ತು ಜೀವ ಉಳಿಸುವಲ್ಲಿ ಅವು ವಹಿಸುವ ಪಾತ್ರದ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದರು.
ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಎಜಿಎಮ್ ಸುರೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

Related posts

Leave a Reply