Header Ads
Header Ads
Breaking News

ವಿ.ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ : 12ನೇ ಬಾರಿ ಸಮಗ್ರ ಚಾಂಪಿಯನ್ ಪಟ್ಟ ಪಡೆದ ಆಳ್ವಾಸ್ ಕಾಲೇಜು

ಮೂಡುಬಿದಿರೆ : ಆಗಸ್ಟ್ 26 ಮತ್ತು 27 ರಂದು ಮಂಗಳೂರು ವಿ.ವಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಸ್ಟ್ರೀಟ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್‍ಶಿಫ್ ಪಡೆದುಕೊಂಡಿದೆ.

ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ 33 ಪದವಿ ಕಾಲೇಜುಗಳ 150 ಪುರುಷ ಮತ್ತು 78 ಮಹಿಳಾ ಕುಸ್ತಿಪಟುಗಳು ಈ ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ವಿಭಾಗದಲ್ಲಿ 5ಚಿನ್ನ, 2ಬೆಳ್ಳಿ, 1ಕಂಚು ಹಾಗೂ ಮಹಿಳೆಯರ ವಿಭಾಗದಲ್ಲಿ 9ಚಿನ್ನ, 1ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಹಾಗೂ ನಮ್ಮ ಕಾಲೇಜಿನ 14 ಕುಸ್ತಿ ಪಟುಗಳು ಅಖಿಲ ಭಾರತ ಅಂತರ್ ವಿ.ವಿ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಪುರುಷರ ಒಟ್ಟು 10 ವಿಭಾಗದಲ್ಲಿ ಕುಸ್ತಿ ಪಂದ್ಯಾಟವು ನಡೆದಿದ್ದು ಇದರಲ್ಲಿ 57 ಕೆ.ಜಿ ವಿಭಾಗದಲ್ಲಿ ನಾಗಾರಾಜ್ ದ್ವೀತಿಯ ಸ್ಥಾನವನ್ನು, 61 ಕೆ.ಜಿ ವಿಭಾಗದಲ್ಲಿ ಪ್ರಭಾಕರ್ ಪ್ರಥಮ ಸ್ಥಾನವನ್ನು, 70 ಕೆ.ಜಿ ವಿಭಾಗದಲ್ಲಿ ಸಚಿನ್ ದ್ವೀತಿಯ, 74 ಕೆ.ಜಿ ವಿಭಾಗದಲ್ಲಿ ವಿಠಲ್ ಬಸವರಾಜ್ ಪ್ರಥಮ ಸ್ಥಾನವನ್ನು, 79 ಕೆ.ಜಿ ಸೋಮಶೇಖರ್ ಮಲ್ಲಪ್ಪ ಪ್ರಥಮ ಸ್ಥಾನವನ್ನು, 86 ಕೆ.ಜಿ ವಿಭಾಗದಲ್ಲಿ ಚೆನ್ನಬಸವರಾಜ್ ಪ್ರಥಮ ಸ್ಥಾನವನ್ನು, 92 ಕೆ.ಜಿ ವಿಭಾಗದಲ್ಲಿ ಶಂಕರ್‍ಗನಜಿ ಪ್ರಥಮ ಸ್ಥಾನವನ್ನು, 97- 125 ವಿಭಾಗದಲ್ಲಿ ತೋಮಸ್ ತೃತೀಯ ಸ್ಥಾನವನ್ನು ಪಡೆದುಕೊಡು 12ನೇ ಬಾರಿ ಚಾಂಪಿಯನ್‍ಷಿಪ್ ಪಟ್ಟವನ್ನು ಗಿಟ್ಟಿಸಿಕೊಡಿದೆ.

 ಮಹಿಳೆಯರ 10 ವಿಭಾಗದಲ್ಲಿ ಕುಸ್ತಿ ಪಂದ್ಯಾಟವು ನಡೆದಿದ್ದು ಇದರಲ್ಲಿ 50 ಕೆ.ಜಿ ವಿಭಾಗದಲ್ಲಿ ವಂದನಾ ಪ್ರಥಮ ಸ್ಥಾನವನ್ನು, 53 ಕೆ.ಜಿ ವಿಭಾಗದಲ್ಲಿ ಆಕಾಂಕ್ಷ ಪ್ರಥಮ ಸ್ಥಾನವನ್ನು 55 ಕೆ.ಜಿ ವಿಭಾಗದಲ್ಲಿ ಭಾರತಿ ಪ್ರಥಮ ಸ್ಥಾನವನ್ನು, 57 ಕೆ.ಜಿ ವಿಭಾಗದಲ್ಲಿ ಸಹನ ಪ್ರಥಮ ಸ್ಥಾನವನ್ನು, 59 ಕೆ.ಜಿ ವಿಭಾಗದಲ್ಲಿ ಡೇಲ್ಫಿವರ್ಗಿಸ್ ಪ್ರಥಮ ಸ್ಥಾನವನ್ನು,62 ಕೆ.ಜಿ ವಿಭಾಗದಲ್ಲಿ ಅಸ್ನಾ ಸರೀನ್‍ಪ್ರಥಮ ಸ್ಥಾನವನ್ನು, 65 ಕೆ.ಜಿ ವಿಭಾಗದಲ್ಲಿ ಪೂಜಿತಬಾಯಿ ದ್ವಿತೀಯ ಸ್ಥಾನವನ್ನು, 68 ಕೆ.ಜಿ ವಿಭಾಗದಲ್ಲಿ ತುಷಾರ ಪ್ರಥಮ ಸ್ಥಾನವನ್ನು, 72 ಕೆ.ಜಿ ವಿಭಾಗದಲ್ಲಿ ಹರ್ಷಿತಾ ಪ್ರಥಮ ಸ್ಥಾನವನ್ನು, 76 ಕೆ.ಜಿ ವಿಭಾಗದಲ್ಲಿ ಅಕ್ಷತಾ ಪ್ರಥಮ ಸ್ಥಾನವನ್ನು ಪಡೆದುಕೊಂಡು 12ನೇ ಬಾರಿ ಚಾಂಪಿಯನ್‍ಷಿಪ್ ಪಟ್ಟÀವನ್ನು ಗಿಟ್ಟಿಸಿಕೊಡಿದೆ ಪಡೆದುಕೊಂಡಿದ್ದಾರೆ.
ಚಿತ್ರ : 29ಮೂಡ್ ಆಳ್ವಾಸ್ ಕುಸ್ತಿ

Related posts

Leave a Reply

Your email address will not be published. Required fields are marked *