Header Ads
Header Ads
Breaking News

ವೆಯಿಟ್ ಝೋನ್ ಜಿಮ್ ನಿಂದ ಸಹಾಯ ಧನ

ಕುಂದಾಪುರ : ಕುಂದಾಪುರದಲ್ಲಿ ದೇಹದಾರ್ಡ್ಯ ಕ್ರೀಡೆಯಲ್ಲಿ ಒಂದಾದ ಜಿಮ್ ಸಂಸ್ಥೆಯನ್ನು ನಡೆಸುತ್ತಿರುವ ವೆಯಿಟ್ ಝೋನ್ ಜಿಮ್ ಮತ್ತು ಫಿಟ್‌ನೆಸ್ ತಂಡವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಉಳಿತಾಯ ಒಂದಷ್ಟು ಭಾಗವನ್ನು ಬಡವರ ಚಿಕಿತ್ಸೆಗಾಗಿ ವಿನಿಯೋಗಿಸಲು ಪಣ ತೊಟ್ಟಿದೆ. ಕಳೆದ ತಿಂಗಳು ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಬ್ಬಡ್ಡಿ ಪಂದ್ಯಾಟದಲ್ಲಿ ಒಟ್ಟಾಗಿದ್ದ ಹಣದಲ್ಲಿ ಪಂದ್ಯಾಟಕ್ಕೆ ಖರ್ಚಾಗಿ ಉಳಿದ ೨೫ ಸಾವಿರ ರೂಪಾಯಿ ಹಣವನ್ನು ಶನಿವಾರ ಸಂಜೆ ಕ್ಯಾನ್ಸರ್ ರೋಗಿಯೊಬ್ಬರ ಚಿಕಿತ್ಸೆಗಾಗಿ ನೀಡಲಾಯಿತು. ಬಳ್ಕೂರು ನಿವಾಸಿ ಪ್ರೆಸಿಲ್ಲಾ ಡಿಸೋಜಾ ಎಂಬುವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಅವರ ಮಗ ಮೆಲ್ವಿನ್ ಡಿಸೋಜಾ ವರಿಗೆ ವೆಯಿಟ್ ಝೋನ್ ಜಿಮ್ ಎಂಡ್ ಫಿಟ್‌ನೆಸ್ ಸೆಂಟರ್‌ನಲ್ಲಿ ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಇನ್ನಷ್ಟು ಹೆಚ್ಚು ತೊಡಗಿಸಿಕೊಳ್ಳುವುದಾಗಿಯೂ ಅವರು ಇದೇ ಸಂದರ್ಭ ಹೇಳಿದರು

Related posts

Leave a Reply