Breaking News

ವೈದ್ಯಕೀಯ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ, ಪುತ್ತೂರಿನಲ್ಲಿ ವೈದ್ಯರ ಮುಷ್ಕರ

ರಾಜ್ಯ ಸರಕಾರ ಹೊರಡಿಸಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆಗೆ ತಿದ್ದುಪಡಿಯನ್ನು ವಿರೋಧಿಸಿ ಖಾಸಗಿ ವೈದ್ಯರು ರಾಜ್ಯಾದ್ಯಂತ ಶುಕ್ರವಾರ ಮುಷ್ಕರ ಕೈಗೊಂಡಿದ್ದು, ಪುತ್ತೂರಿನಲ್ಲಿಯೂ ಖಾಸಗಿ ವೈದ್ಯರಿಂದ ಬೆಂಬಲ ವ್ಯಕ್ತವಾಗಿದೆ.
ಮಸೂದೆಯಲ್ಲಿ ಅಳವಡಿಸಲಾದ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿ ಮತ್ತು ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಅಂತಹ ವೈದ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಕಾನೂನು ವೈದ್ಯರಿಗೆ ತೀವ್ರ ಸಂಕಷ್ಟಕ್ಕೀಡು ಮಾಡಿರುವುದರಿಂದ ಈ ವಿಧೇಯಕವನ್ನು ಶೀಘ್ರವೇ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಖಾಸಗಿ ವೈದ್ಯರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪುತ್ತೂರು ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್ ಮಾಡದೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಹೊರ ರೋಗಿಗಳ ತಪಾಸಣಾ ಕಾರ್ಯ ನಡೆದಿಲ್ಲ. ರೋಗಿಗಳ ತುರ್ತು ಸಂದರ್ಭದಲ್ಲಿ ಮಾತ್ರ ವೈದ್ಯರು ಕಾರ್ಯ ನಿರ್ವಹಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮುಷ್ಕರದ ಬಿಸಿ ಪುತ್ತೂರಿಗೂ ತಟ್ಟಿದೆ.
ರಾಜ್ಯ ಸರಕಾರ ಹೊರಡಿಸಿರುವ ಈ ಮಸೂದೆಗೆ ಆರಂಭಿಕ ಹಿನ್ನಡೆಯಾದಂತಾಗಿದೆ. ವೈದ್ಯ ಸಮೂಹ ಈ ವಿಧೇಯಕವನ್ನು ಗಂಭೀರವಾಗಿ ವಿರೋಧಿಸುತ್ತಿದೆ. ವೈದ್ಯಕೀಯ ವೃತ್ತಿ ನಿರ್ವಹಣೆಗೆ ಕಂಟಕವಾಗಲಿರುವ ಈ ವಿಧೇಯಕದ ವಿರುದ್ಧ ವೈದ್ಯವೃಂದ ಸಾಮೂಹಿಕ ಧ್ವನಿ ಎತ್ತಿದೆ. ಸಂದರ್ಭದಲ್ಲಿ ಮಾತ್ರ ರೋಗಿಗಳ ತಪಾಸಣೆ ನಡೆಸಿದ್ದೇವೆ. ಹೊರ ರೋಗಿಗಳನ್ನು ತಪಾಸಣೆ ನಡೆಸಿಲ್ಲ.

Related posts

Leave a Reply