

ವೈಯಕ್ತಿಯ ಧ್ವೇಷದ ಹಿನ್ನಲೆಯಲ್ಲಿ ಐವರ ತಂಡವೊಂದು ಮೂವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ.ಗಂಟಾಲ್ಕಟ್ಟೆಯ ಗೋವುಗುಡ್ಡೆ ನಿವಾಸಿಗಳಾದ ಮಹಮ್ಮದ್ ಅನ್ಸಾರ್, ಶಬೀರ್ ಮತ್ತು ಇಸ್ಮಾಯಿಲ್ ಹಲ್ಲೆಗೊಳಗಾಗಿ ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು. ಅದೇ ಪರಿಸರದ ಸಾಹುಲ್, ಫಾರೂಕ್, ಜಲೀಲ್, ಇಮ್ರಾನ್ ಮತ್ತು ಶಾಫಿ ಎಂಬವರು ಮೂವರ ಮೇಲೆ ಹಲ್ಲೆಗೈದವರು ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಗಳು ದನ ಕಳ್ಳತನ, ಕೋಮುಗಲಭೆ ಸೇರಿದಂತೆ ವಿವಿಧ ಕ್ರಿಮಿನಲ್ ಅಪರಾಧ ಹಿನ್ನಲೆ ಹೊಂದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.