Header Ads
Breaking News

ಶಕ್ತಿ ವಸತಿಯುತ ಶಾಲೆಯಲ್ಲಿ ’ಶಕ್ತಿ ಕ್ಯಾನ್ ಕ್ರಿಯೇಟ್ 2019’ ಬೇಸಿಗೆ ಶಿಬಿರ

ಶಕ್ತಿನಗರದ ಶಕ್ತಿ ವಸತಿಯುತ ಶಾಲೆಯಲ್ಲಿ ಎಪ್ರಿಲ್ 11ರಿಂದ 30ರ ವರೆಗೆ ಶಕ್ತಿಕ್ಯಾನ್ ಕ್ರಿಯೇಟ್ 2019 ಬೇಸಿಗೆ ಶಿಬಿರ ನಡೆಯಲಿದೆ ಎಂದು ಶಕ್ತಿ ನಗರದ ಶಕ್ತಿ ವಸತಿಯುತ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ ತಿಳಿಸಿದ್ರು. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಎಪ್ರಿಲ್11ರಿಂದ ಇಪ್ಪತ್ತು ದಿನಗಳ ಕಾಲದ ಬೆಸಿಗೆ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ. ಪೂರ್ವಾಹ್ನ 8ರಿಂದ ಸಂಜೆ 5ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯೋಗ ಚಿತ್ರಕಲೆ, ಕರಕುಶಲ ಕಲೆ, ವ್ಯಂಗ್ಯಚಿತ್ರ, ಮುಖವಾಡ ರಚನೆ, ಫೋಮ್ ಆರ್ಟ್, ಆವೆ ಮಣ್ಣಿನ ರಚನೆ, ಹಾಗೂ ಇನ್ನಿತರ ಚಟುವಟಿಕೆಗಳು ಶಿಬಿರದಲ್ಲಿ ನಡೆಯಲಿದೆ ಎಂದು ಹೇಳಿದ್ರು. ಇನ್ನು ನಾಡಿನ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಪಿಎನ್ ಆಚಾರ್ಯ ಮಣಿಪಾಲ, ವೆಂಕಿ ಪಲಿಮಾರ್, ಪೆರ್ಮುದೆ ಮೋಹನ್ ಕುಮಾರ್, ಜಾನ್ ಚಂದ್ರನ್, ದಿನೆಶ್ ಹೊಳ್ಳ ಹಾಗೂ ಮತ್ತಿತರ ಖ್ಯಾತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಯಾವುದೇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶವಿದ್ದು, ನಗರದ ಪ್ರಮುಖ ಕೇಂದ್ರಗಳಿಂದ ಶಾಲಾ ಬಸ್‍ನಲ್ಲಿ ಸಂಚಾರ ಸೌಲಭ್ಯ ಒದಗಿಸಲಾಗುವುದು ಎಂಬ ಮಹಿತಿಯನ್ನ ನೀಡಿದ್ರು. ಈ ಸಂದರ್ಭ ಶಕ್ತಿ ಎಜುಕೇಶನ್ ಟ್ರಸ್ಟ್‍ನ ಆಡಳಿತಾಧಿಕಾರಿ ಬೈಕಾಡಿ ಜನಾರ್ಧನ ಆಚಾರ್, ಪ್ರಧಾನ ಸಲಹೆಗಾರ ರಮೇಶ್ ಕೆ. ಪತ್ರಿಕಾಗೋಷ್ಠೀಯಲ್ಲಿ ಉಪಸ್ಥಿತರಿದ್ರು. 

Related posts

Leave a Reply

Your email address will not be published. Required fields are marked *