Header Ads
Header Ads
Breaking News

ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಶಾಲೆಯ ವನಮಹೋತ್ಸವ ಶಾಲೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮ

ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಶಾಲೆಯ ವನಮಹೋತ್ಸವವು ಇತ್ತೀಚೆಗೆ ಶಾಲೆಯ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಗುಜರಾತಿ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಅತಿಥಿಗಳು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜರತ್ನ ಅಂತರಾಷ್ಟೀಯ ಆರ್ಯಭಟ ಪ್ರಶಸ್ತಿ ವಿಜೇತ ಕೃಷ್ಣಪ್ಪ ಗೌಡ ಪಡಂಬೈಲ್ ಇವರು ತಾರಸಿ ಕೃಷಿಯ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು.  ಶಾಲಾ ಮುಖ್ಯೋಪಾದ್ಯಾಯರಾದ ಶ್ರೀಮತಿ ಅಶ್ವಿನಿ ಶೆಣೈರವರು ಪ್ರತಿಯೋರ್ವ ವಿದ್ಯಾರ್ಥಿ ಒಂದು ಸಸಿಯನ್ನು ತಾರಸಿಯಲ್ಲಿ ನೆಡಲು ಪ್ರತಿಜ್ಞೆ ಭೋದಿಸಿದರು. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರಾಜನ್ ಬಲದೇವ್‌ರವರು ವಹಿಸಿದ್ದರು.ಈ ಸಂದರ್ಭದಲ್ಲಿ ತಾರಸಿ ಕೃಷಿ ಪರಿಣಿತ ಕೃಷ್ಣಪ್ಪ ಗೌಡರನ್ನು ಸನ್ಮಾನಿಸಲಾಯಿತು. ಶಾಲಾ ಸಂಚಾಲಕರಾದ ಶ್ರೀ ರಾಜನ್ ಬಲದೇವ್‌ರವರು ಶುಭ ಹಾರೈಸಿದರು. ವಿದ್ಯಾರ್ಥಿ ದೀಪಕ್ ವಂದನಾರ್ಪಣೆಗೈದರು. ನಾಲ್ಕನೇ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳು ಗಿಡ ಉಳಿಸಿ ಪರಿಸರ ರಕ್ಷಿಸಿ ಎಂಬ ನೃತ್ಯ ರೂಪಕವನ್ನು ಪ್ರದರ್ಶಿಸಿದರು.

Related posts

Leave a Reply