Header Ads
Header Ads
Breaking News

ಶ್ರೀ ವಯನಾಟು ಕುಲವನ್ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ

ಮಂಜೇಶ್ವರ: ಮಾನ್ಯದ ಶ್ರೀ ವಯನಾಟು ಕುಲವನ್ ದೈವಸ್ಥಾನದ ಪುನರ್ ನಿರ್ಮಾಣದ ಬಗ್ಗೆ ರೂಪೀಕರಿಸಿದ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಪ್ರಥಮ ಹಂತವಾಗಿ ಪೀಠಾದಿಗಳಿಗಿರುವ ವೃಕ್ಷ ಮುಹೂರ್ತ ಮತ್ತು ಬಾಲಾಲಯ ಪ್ರತಿಷ್ಟೆಯ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗಂಗಾಧರ ನೆಲ್ಲಿತ್ತಲ, ಸೇವಾ ಸಮಿತಿಯ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ,ಸುಂದರ ಶೆಟ್ಟಿ ಕೊಲ್ಲಂಗಾನ, ರಾಮ ಕಾರ್ಮಾರು, ಪಟ್ಲ ಭಗಗವತಿ ಸ್ಥಾನದ ಕಾರ್ನವರ್ ಅಧ್ಯಕ್ಷ ರಾಘವನ್ ಕಡಂಬಳ, ಪ್ರಭಾಕರನ್ ಪಟ್ಲ, ಹಾಗೂ ಇನ್ನಿತರ ಭಕ್ತಾದಿಗಳ ಸಮಕ್ಷಮದಲ್ಲಿ ದೈವಪಾತ್ರಿಗಳಾದ ಅರವಿಂದನ್ ಮತ್ತು ಗಂಗಾಧರನ್ ಅವರು ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿದರು.ಮಾನ್ಯ ಶ್ರೀ ವಯನಾಟು ಕುಲವನ್ ದೈವಸ್ಥಾನದ ಪೀಠಗಳಿಗಿರುವ ವೃಕ್ಷ ಮುಹೂರ್ತ ಕೂಡಾ ಸಂಪನ್ನ ಗೊಂಡಿತು. ಬದಿಯಡ್ಕ ಗ್ರಾಮ ಪಂಚಾಯತು ಬೇಳ ಗ್ರಾಮದ ಮಾನ್ಯದ ಸಸಿಹಿತ್ತಿಲು ಎಂಬಲ್ಲಿ ಈ ಶ್ರೀ ವಯನಾಟು ಕುಲವನ್ ದೈವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಊರ ಭಕ್ತಾದಿಗಳ ಸಹಕಾರದಿಂದ ಜೀರ್ಣೋದ್ಧಾರ ಸಮಿತಿಯನ್ನು ಕೂಡಾ ರಚನೆ ಮಾಡಲಾಯಿತು.

Related posts

Leave a Reply