Header Ads
Breaking News

ಸಂಪೂರ್ಣ ಕಿತ್ತು ಹೋದ ಕಲ್ಲಡ್ಕದಿಂದ ನಿಟಿಲಾಪುರ, ಬೋಳಂತೂರು ಸಂಪರ್ಕ ರಸ್ತೆ

ಬಂಟ್ವಾಳ: ರಸ್ತೆಗೆ ಹಾಕಿದ ಡಾಮಾರು ಕಿತ್ತು ಹೋಗಿದೆ.. ರಸ್ತೆ ತುಂಬಾ ಹೊಂಡಗಳು ತುಂಬಿಕೊಂಡಿದೆ… ಮಳೆಗಾಲದಲ್ಲಿ ಕೆಸರು ತುಂಬಿಕೊಂಡು ಸುಗಮ ಸಂಚಾರಕ್ಕೆ ಅಡ್ಡಿಯುಂಟಾದರೆ ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಧೂಳು ನುಂಗಿಕೊಂಡು ಹೋಗುವ ಅನಿವಾರ್ಯತೆ…ಕಲ್ಲಡ್ಕದಿಂದ ನಿಟಿಲಾಪುರ, ಬೋಳಂತೂರು, ಸಾಲೆತ್ತೂರು ಸಂಪರ್ಕಿಸುವ ಜಿಲ್ಲಾ ಪಂಚಾಯಿತಿ ರಸ್ತೆಯ ದಯಾನೀಯ ಸ್ಥಿತಿ ಇದು.
ಗೋಳ್ತಮಜಲು ಗ್ರಾಮದ ಕಲ್ಲಡ್ಕದಿಂದ ಸಂಪರ್ಕ ಪಡೆಯುವ ಈ ರಸ್ತೆ ರೈಲ್ವೇ ಮೇಲ್ಸೆತುವೆಯ ಬಳಿ ಸಂಪೂರ್ಣ ಹಾನಿಗೀಡಾಗಿದೆ. ಸುಮಾರು 2 ಕಿ.ಮೀ. ದೂರದವರೆಗೆ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡಬೇಕು. ಡಾಮರು, ರಸ್ತೆಯಿಂದ ಕಳಚಿ ಹೋಗಿ ಗುಂಡಿಗಳು ತುಂಬಿಕೊಂಡು ಡಾಮಾರು ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣಗೊಂಡಿದೆ. ಬಸ್ಸು ಸಹಿತ ದಿನ ನಿತ್ಯಾ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಹೊಂಡಗಳಲ್ಲಿ ಸಂಚರಿಸುವ ವೇಳೆ ಪ್ರಾಣವೇ ಕೈಗೆ ಬಂದಂತ್ತಾಗುತ್ತದೆ. ದ್ವಿಚಕ್ರ ವಾಹನ ಸವಾರರ ಹಾಗೂ ಪಾದಾಚಾರಿಗಳು ಮಳೆಗಾಲದದಲ್ಲಿ ಕೆಸರು ಎರಚಿಸಿಕೊಂಡಿದ್ದರೆ, ಬೇಸಿಗೆ ಆರಂಭವಾದ ಬಳಿಕ ಧೂಳು ಸೇವಿಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಲ್ಲಿ ದೂರಿ ಕೊಂಡರೂ ರಸ್ತೆ ದುರಸ್ತಿಯಾಗುವ ಬದಲು ಭರವಸೆಯ ಉತ್ತರ ಮಾತ್ರ ಸಿಗುತ್ತದೆ ಎನ್ನುವುದು ಗ್ರಾಮಸ್ಥರ ಆರೋಪ.

ತಾಲೂಕಿನ ಇತಿಹಾಸ ಪ್ರಸಿದ್ದ ಶಿವಕ್ಷೇತ್ರ ನಿಟಿಲಾಪುರ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೋಗಲು ಈ ರಸ್ತೆಯೇ ಆಧಾರ. ನೆಟ್ಲ ಹಾಗೂ ಬೋಳಂತೂರಿನ ಶಾಲೆಗಳಿಗೂ ಈ ರಸ್ತೆ ಸಂಪರ್ಕ ಕೊಂಡಿ. ಇನ್ನೂ ಆ ಭಾಗದ ಜನರು ಕಲ್ಲಡ್ಕ, ಬಿ.ಸಿ.ರೋಡು ಬರಬೇಕಾದರೆ ಏಕೈಕ ರಸ್ತೆಯನ್ನೇ ಅವಲಂಬಿಸಬೇಕು. ಈ ಭಾಗದ ವೃದ್ದರು, ರೋಗಿಗಳು, ಗರ್ಭಿಣಿ ಸ್ತ್ರೀಯರನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸುವ ಪಡುವ ಕಷ್ಟ ಹೇಳತೀರದು. ಡಾಮಾರು ಕಳಚಿ ಧೂಳಿನ ಅಭಿಷೇಕದಿಂದಾಗಿ ಪರಿಸರದ ಮನೆಗಳೆಲ್ಲಾ ಧೂಳುಮಯವಾಗಿದೆ. ಈ ರಸ್ತೆ ಇಂದು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ ಎಂದು ಕಾಯುವುದೇ ಬಂತು. ಆದರೆ ಈ ಕಾಲ ಇನ್ನೂ ಕೂಡ ಬಂದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮಸ್ಥರು.

Related posts

Leave a Reply

Your email address will not be published. Required fields are marked *