Header Ads
Breaking News

ಸರ್ಕಾರದ ಭೂಸ್ವಾಧೀನ ಕಾಯಿದೆಗೆ ವಿರೋಧ ಹಿನ್ನೆಲೆ: ಜೂ.10 ರಂದು ರಾಜ್ಯ ರೈತ ಸಂಘ ಹಸಿರುಸೇನೆಯಿಂದ ರಾಜ್ಯಾದ್ಯಂತ ಹೆದ್ದಾರಿ ತಡೆ

ರಾಜ್ಯ ಸಮ್ಮಿಶ್ರ ಸರಕಾರವು ತಿದ್ದುಪಡಿ ಮಾಡಿ ಕೈಗೊಂಡಿರುವ ಭೂ ಸ್ವಾಧೀನ ಕಾಯಿದೆಯನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಸಿರುಸೇನೆ ವತಿಯಿಂದ ಜೂ.10 ರಂದು ರಾಜ್ಯಾದ್ಯಂತ ಹೆದ್ದಾರಿ ತಡೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ2013 ರಲ್ಲಿ ಹಿಂದಿನ ಯುಪಿಎ ಸರಕಾರ ಕೇಂದ್ರದಲ್ಲಿ ಜಾರಿಗೆ ತಂದಿದ್ದ ಭೂ ಸ್ವಾಧೀನ  ಕಾಯಿದೆ ರೈತರ ಪರ ಕಾಯಿದೆಯಾಗಿತ್ತು. ಆದರೆ ಇದೀಗ ರಾಜ್ಯದ ಸಮ್ಮಿಶ್ರ ಸರಕಾರ ಈ ಕಾಯಿದೆಗೆ ತಿದ್ದಪಡಿ ತಂದು ಭೂ ಸ್ವಾಧೀನ ದ ಅ„ಕಾರವನ್ನು ಜಿಲ್ಲಾ„ಕಾರಿಗಳಿಗೆ ನೀಡುವ ನಿರ್ಣಯ ಕೈಗೊಂಡಿದೆ. ರೈತರ ಹಿತಕ್ಕೆ ಮಾರಕವಾಗಿರುವ ಈ ಕಾಯಿದೆಯ ಜಾರಿಯನ್ನು ರೈತ ಸಂಘ ಖಂಡಿಸುತ್ತದೆ ಎಂದು ಹೇಳಿದರು.

ಯುಪಿಎ ಸರಕಾರ ತಂದ ಕಾಯಿದೆಯ ಪ್ರಕಾರ ರೈತನ ಭೂ ಸ್ವಾ„ೀನಕ್ಕೆ ಆತನ ಅನುಮತಿ ಮೇರೆಗೆ ಗ್ರಾಮಾಂತರದಲ್ಲಿ 4 ಪಟ್ಟು ಹಾಗೂ ನಗರದಲ್ಲಿ 2 ಪಟ್ಟು ಪರಿಹಾರ ನೀಡಲು ಸೂಚಿಸಿತ್ತು. ಈಗ ರಾಜ್ಯ ಸರಕಾರ ತಿದ್ದುಪಡಿ ಮಾಡಿರುವ ಕಾಯಿದೆಯಂತೆ ಜಿಲ್ಲಾ„ಕಾರಿ ತೋಚಿದ ಪರಿಹಾರವನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿದರು. ವಿರೋಧ ಪಕ್ಷ ಬಿಜೆಪಿಯೂ ಇದಕ್ಕೆ ಬೆಂಬಲಿಸಿ ಕೈಜೋಡಿಸಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಸಮ್ಮಿಶ್ರ ಸರಕಾರದ ಭೂ ಸ್ವಾಧೀನ ಕಾಯಿದೆಯನ್ನು ವಿರೋಧಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಜೂ.10 ರಂದು ರೈತರು ಹೆದ್ದಾರಿ ತಡೆ ನಡೆಸಲಿದ್ದಾರೆ. ಪುತ್ತೂರಿನಲ್ಲಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ 10.30 ಕ್ಕೆ ಮಾಣಿ -ಮೈಸೂರು ಹೆದ್ದಾರಿಯನ್ನು ದರ್ಬೆ ವೃತ್ತದಲ್ಲಿ ತಡೆದು ಭೂ ಸ್ವಾಧೀನ  ಕಾಯಿದೆ ತಿದ್ದುಪಡಿಯನ್ನು ಹಿಂಪಡೆಯಲು ಸರಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿ ಜಲಕ್ಷಾಮ ಉಂಟಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ನಗರ ಪ್ರದೇಶವನ್ನು ಕೇಂದ್ರೀಕರಿಸಿ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಗ್ರಾಮಾಂತರದ ಕೃಷಿಕರ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ„ಕಾರಿಯವರು ಜಿಲ್ಲಾ ಉಸ್ತವಾರಿ ಸಚಿವರ ಸಮಕ್ಷಮ ಕೂಡಲೇ ರೈತರ ಸಭೆ ನಡೆಸಬೇಕು ಎಂದು ಒತ್ತಾಯಿಸಿದ ಶ್ರೀಧರ ಶೆಟ್ಟಿ, ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಸರಕಾರವನ್ನು ಆಗ್ರಹಿಸಿದರು.

2009 ರ ಹಿಂದಿನ ಸುಸ್ತಿ ಸಾಲದಾರ ರೈತರು ಜಿಲ್ಲೆಯಲ್ಲಿ ಸುಮಾರು 150 -200 ಮಂದಿ ಇದ್ದಾರೆ. ಸರಕಾರದ ಸಾಲಮನ್ನಾ ಯೋಜನೆಯಿಂದ ಇವರು ವಂಚಿತರಾಗಿದ್ದಾರೆ. ಇಂತವರ ಸಾಲವನ್ನು ಕೂಡಲೇ ಮನ್ನಾ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ಹಸಿರು ಸೇನೆ ಕಡಬ ತಾಲೂಕು ಅಧ್ಯಕ್ಷ ವಿಕ್ಟರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹರಿಣ ವಿ. ರೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *