
ಕಾರ್ಮಿಕರ ವಿರುದ್ಧ ಕಾನೂನುಗಳನ್ನು ಜಾರಿ ತರುವ ಮೂಲಕ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸದಾ ರೈತ ವಿರೋಧಿಯಾಗಿ, ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ದ.ಕ ಜಿಲ್ಲಾ ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಆಗ್ರಹಿಸಿದ್ರು. ಅವರು ದ.ಕ ಜಿಲ್ಲಾ ಸಿಐಟಿಯು ವತಿಯಿಂದ ಮಂಗಳೂರಿನ ಮಿನಿವಿಧಾನಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ರು. ಕೇಂದ್ರ ಸರ್ಕಾರ ಜನಪರ ಎಂದು ಹೇಳಿಕೊಂಡು ರೈತರ ಹಾಗೂ ಕಾರ್ಮಿಕರ ವಿರುದ್ಧವಾಗಿ ಕಾನೂನಗಳನ್ನು ಜಾರಿ ಮಾಡ್ತಾ ಇದೆ. ರೈತರು ಕಳೆದ 45 ದಿನಗಳಿಂದ ದೇಶದ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಹೋರಾಟಗಳನ್ನು ಮಾಡ್ತಾ ಇದ್ದಾರೆ. 60ಕ್ಕೂ ಮಿಕ್ಕಿ ಈ ದೇಶಕ್ಕೆ ಅನ್ನ ನೀಡ್ತಾ ಇರೋ ರೈತರು ಪ್ರಾಣ ಅರ್ಪಿಸಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇದಕ್ಕೆ ಕ್ಯಾರೇ ಅನ್ತಾ ಇಲ್ಲ. ಈ ಸರ್ಕಾರ ಕೇವಲ ಅಂಬಾನಿ, ಅದಾನಿಯ ಪರವಾಗಿ ಸರ್ಕಾರ ಇದೆ. ಕೃಷಿ ನೀತಿಗೆ ಪರವಾಗಿ ಸರ್ಕಾರ ಇಲ್ಲ ಎಂದು ಹೇಳಿದ್ರು.