Header Ads
Header Ads
Breaking News

ಸರ್ವ ಧರ್ಮದಲ್ಲೂ ಯೋಗ : ಭಟ್ಟಾರಕಶ್ರೀಗಳಿಂದ ಯೋಗ ಪಾಠ

ಮೂಡುಬಿದಿರೆ: ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಅಂಗವಾಗಿ ಜೈನಕಾಶಿ ಮೂಡುಬಿದಿರೆ ಜೈನಮಠದ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಪಂಡಿತಾಚಾಯವರ್ಯ ಸ್ವಾಮೀಜಿ ಸ್ವಸ್ತಿಶ್ರೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗಪಾಠ ಮಾಡಿದರು. ರಮಾರಾಣಿ ಶೋಧ ಸಂಸ್ಥಾನದ ಸಭಾಭವನದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಯೋಗಾಸನ ಪ್ರದರ್ಶನದಲ್ಲಿ ಭಟ್ಟಾರಕಶ್ರೀ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಮನಸ್ಸು ಹಾಗೂ ದೇಹಗಳೆರಡನ್ನು ಸುಸ್ಥಿತಿಯಲ್ಲಿಡಲು ಯೋಗ ಅವಶ್ಯಕ ಪ್ರತಿಯೊಂದು ಧರ್ಮದಲ್ಲಿಯೂ ಯೋಗವಿದೆ. ನಾವು ಬಸದಿ, ಮಸೀದಿ, ದೇವಾಲಯ, ಇಗರ್ಜಿಗಳಲ್ಲಿ ಯೋಗಾಸನದ ಮಾದರಿಯಲ್ಲೇ ಪ್ರಾರ್ಥನೆ ಸಲ್ಲಿಸುತ್ತೇವೆ. ಇವು ಕೂಡ ಒಂದು ರೀತಿಯಲ್ಲಿ ಯೋಗವೇ ಆಗಿದೆ. ಭಾರತೀಯ ಪಾರಂಪರಿಕ ಯೋಗಕ್ಕೆ ವಿಶ್ವ ಮಾನ್ಯತೆ ಸಿಕ್ಕಿರುವುದು ನಮಗೆ ಹೆಮ್ಮೆ. ಯೋಗ ಜಾತಿ, ಧರ್ಮ, ಸೀಮೆಗಳನ್ನು ಮೀರಿರುವಂತದ್ದು, ಯೋಗಾಭ್ಯಾಸವು ನಿರಂತರವಾಗಿದ್ದರೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿ, ಕಲಿಕೆಯಲ್ಲಿ ಉತ್ತಮಗೊಳಿಸಲು ಸಾಧು ಎಂದು ಭಟ್ಟಾರಕಶ್ರೀ ಹೇಳಿದರು.
ಸ್ವಸ್ತಿಶ್ರೀ ಕಾಲೇಜಿನ ಪ್ರಾಂಶುಪಾಲೆ ಸೌಮ್ಯಶ್ರೀ, ಉಪನ್ಯಾಸಕರಾದ ನೇಮಿರಾಜ್, ಉದಯ ಕುಮಾರ್ ಭಟ್ ಉಪಸ್ಥಿತರಿದ್ದರು.

Related posts

Leave a Reply