Header Ads
Breaking News

ಸಹ್ಯಾದ್ರೀ ವಿಜ್‍ಕ್ವಿಜ್ 2020 ಗ್ರಾಂಡ್ ಫಿನಾಲೆ

ಸಹ್ಯಾದ್ರಿಕಾಲೇಜುಆಪ್‍ಇಂಜಿನಿಯರಿಂಗ್‍ಏಂಡ್ ಮ್ಯಾನೇಜ್‍ಮೆಂಟ್‍ನ, ವ್ಯವಹಾರಿಕ ಆಡಳಿತ (ಎಂಬಿಎ) ವಿಭಾಗವು ಸಹ್ಯಾದ್ರೀ ವಿಜ್‍ಕ್ವಿಜ್ 2020ಗ್ರಾಂಡ್ ಫಿನಾಲೆಯನ್ನು ಮಾರ್ಚ್6 ರಂದು ನಡೆಸಲಿದೆ.ಪದವಿ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕಜಗತ್ತಿನಜ್ಞಾನವನ್ನುರೂಪಿಸುವ ಉದ್ದೇಶದಿಂದಆರಂಭವಾದ ಈ ಸಹ್ಯಾದ್ರೀ ವಿಜ್‍ಕ್ವಿಜ್, ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನದೊಂದಿಗೆ, ವ್ಯವಹಾರಜಗತ್ತು, ಮಾರುಕಟ್ಟೆ, ಮಾನವ ಸಂಪನ್ಮೂಲ ಮತ್ತು ಹಣಕಾಸಿಗೆ ಪೂರಕವಾದ ಪರಿಜ್ಞಾ£ವನ್ನುರೂಪಿಸುತ್ತದೆ.

ಕಾಲೇಜು ಹಂತ ಮತ್ತು ಸಹ್ಯಾದ್ರೀಕ್ಯಾಂಪಸ್‍ಗ್ರಾಂಡ್ ಫಿನಾಲೆ ಎಂಬ ಎರಡು ಹಂತದಲ್ಲಿ ಸಹ್ಯಾದ್ರೀ ವಿಜ್‍ಕ್ವಿಜ್ ನಡೆಯುತ್ತದೆ. ಹಾಸನ, ಶಿವಮೊಗ್ಗ, ಕುಮಟ, ಮಂಗಳೂರು, ಉಡುಪಿ, ಕೊಡಗು, ಕಾರವಾರ ಮತ್ತುಕಾಸರಗೋಡು ವಿಭಾಗದ ಸುಮಾರು 50 ಪದವಿ ಕಾಲೇಜುಗಳಲ್ಲಿ ಪೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಕಾಲೇಜು ಹಂತದ ಸಹ್ಯಾದ್ರೀ ವಿಜ್‍ಕ್ವಿಜ್ 2020ನ್ನು ನಡೆಸಲಾಯಿತು. ಅಂತಿಮ ಪದವಿಯ ಮೂರು ವಿದ್ಯಾರ್ಥಿಗಳನ್ನೊಳಗೊಂಡ ಒಂದುತಂಡದಂತೆ, ಸುಮಾರು 9000 ವಿದ್ಯಾರ್ಥಿಗಳು ಕಾಲೇಜ್ ಹಂತದಲ್ಲಿ ಭಾಗವಹಿಸಿದ್ದಾರೆ.ಇವರಲ್ಲಿಆಯ್ಕೆಯಾದ ಸುಮಾರು 950 ವಿದ್ಯಾರ್ಥಿಗಳು ಮಾರ್ಚ್ 08ರಂದು ನಡೆಯುವ ಸಹ್ಯಾದ್ರೀ ವಿಜ್‍ಕ್ವಿಜ್ 2019 ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಾಗುವ ಈ ಸಹ್ಯಾದ್ರೀ ವಿಜ್‍ಕ್ವಿಜ್ 2020 ಗ್ರಾಂಡ್ ಫಿನಾಲೆಯಲ್ಲಿ ಮುಖ್ಯಅಥಿತಿಯಾಗಿ ಶ್ರೀ ಪ್ರವೀಣ್‍ಕಾಮತ್‍ಕುಂಬ್ಳ, ಜನರಲ್ ಮೇನೇಜರ್ ಮತ್ತು ಹೆಚ್‍ಆರ್ ಮುಖ್ಯಸ್ಥರು, ಗ್ಲೊಬಲ್ ಡೆಲಿವರಿಆಂಡ್ ಎನೇಬಲ್‍ಮೆಂಟ್, ವಿಪ್ರೊ ಲಿಮಿಟೆಡ್. ಹಾಗೂ ನಮ್ಮ ಹಳೆ ವಿದ್ಯಾರ್ಥಿಯಾದ ಶ್ರೀ ಪ್ರಖ್ಯಾತ್ ಭಂಢಾರಿ, ಎಸೊಸಿಯೇಟ್, ಪೀಪ್‍ಲ್‍ಆಂಡ್‍ಕಲ್ಚರ್, ಗ್ರಾಂಟ್‍ಥೊರ್ಟನ್, ಎಲ್‍ಎಲ್‍ಪಿ ಬೆಂಗಳೂರು ಇವರು ಭಾಗವಹಿಸಲಿದ್ದಾರೆ. ಎರಡು ಪ್ರಾಥಮಿಕ ಹಂತ ಮತ್ತುಒಂದುಕೊನೆಯ ಹಂತವಾಗಿ ನಡೆಯುವ ಸಹ್ಯಾದ್ರೀ ವಿಜ್‍ಕ್ವಿಜ್ 2020 ಗ್ರಾಂಡ್ ಫಿನಾಲೆಯಲ್ಲಿ ವಿಜೇತರುರೂ 25000/- ಪ್ರಥಮ, ರೂ 15000/- ದ್ವಿತೀಯ ಹಾಗೂ ರೂ 10000/- ತೃತೀಯ ಬಹುಮಾನವಾಗಿ ಪಡೆಯಲಿದ್ದಾರೆ.

ಗ್ರಾಂಡ್ ಫಿನಾಲೆಯ ಸಮಾರೋಪ ಸಮಾರಂಭದಲ್ಲಿ ಶ್ರೀ ಜಯರಾಜ್ ಬಿ.ರೈ, ಅಧ್ಯಕ್ಷರು, ಶ್ರೀ ರಾಮಕೃಷ್ಣಕ್ರೆಡಿಟ್‍ಕೊಪರೇಟಿವ್ ಸೊಸೈಟಿ, ಮಂಗಳೂರು ಹಾಗೂ ಶ್ರೀ ದಿವಾಕರ್‍ಕದ್ರಿ, ಅಧ್ಯಕ್ಷರು, ಎನ್ ಐ ಪಿ ಎಂ, ಮಂಗಳೂರು ಚಾಪ್ಟರ್, ಜನರಲ್ ಮೇನೇಜರ್, ಕಾರ್ಡೋಲೈಟ್ ಮಂಗಳೂರು ಇವರು ಅಥಿತಿಗಳಾಗಿ ಭಾಗವಹಿಸಲಿದ್ದಾರೆ.

6ನೇ ಆವೃತಿಯಾಗಿ ನಡೆಯುವ ಈ ವಿಜ್‍ಕ್ವಿಜ್ 2020ರ ನಗದು ಬಹುಮಾನವನ್ನು ಶ್ರೀ ರಾಮಕೃಷ್ಣಕ್ರೆಡಿಟ್‍ಕೊಪರೇಟಿವ್ ಸೊಸೈಟಿ, ಮಂಗಳೂರು, ಇವರು ಪ್ರಾಯೊಜಿಸಿದ್ದಾರೆ.

Related posts

Leave a Reply

Your email address will not be published. Required fields are marked *