
ತುಳುನಾಡಿನ ದೈವಾರಾಧನೆಗಳು ತಮ್ಮದೇ ಆದ ಭವ್ಯ ಸಂಸ್ಕೃತಿ, ಆಚರಣೆಯನ್ನು ಹೊಂದಿದೆ. ಈ ಆಚರಣೆಯ ಮೂಲಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಿಂದನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಯುವ ತುಳುನಾಡು ಕುಡ್ಲ ಸಂಘಟನೆ ಎಚ್ಚರಿಕೆ ನೀಡಿದೆ.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರೋಶನ್ ರೆನಾಲ್ಡ್ ಅವರು, ತುಳುನಾಡಿನ ಸಂಸ್ಕೃತಿ, ಪರಂಪರೆಯ ಊರು. ದೈವರಾಧನೆ ಇಲ್ಲಿಯ ವಿಶಿಷ್ಟತೆಯಾಗಿದ್ದು ಕೆಲವರು ನಂಬಿಕೆಗೆ ಘಾಸಿ ಉಂಟು ಮಾಡುವ ರೀತಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವುದನ್ನು ವಿರೋಧಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ತುಳುನಾಡು ಕುಡ್ಲದ ಗೌರವಾಧ್ಯಕ್ಷ ಯಾದವ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಿತೇಶ್ ಡಿಸೋಜ, ಪ್ರಧಾನ ಸಂಚಾಲಕ ಸನತ್, #ಕೋಶಾಧಿಕಾರಿ ರಕ್ಷಣ್ ಪೂಜಾರಿ, ಜತೆ ಕಾರ್ಯದರ್ಶಿ ರಮೇಶ್ ಕುಲಾಲ್ ಉಪಸ್ಥಿತರಿದ್ದರು.