Header Ads
Breaking News

ಸಾಮಾಜಿಕ ಜಾಲತಾಣಗಳ ವ್ಯವಸ್ಥಿತ ನಿರ್ವಹಣೆ, ವ್ಯಕ್ತಿತ್ವವನ್ನು ಗುರುತಿಸುತ್ತದೆ: ಕಿರಣ್ ಶೆಣೈ

ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಗುರುತಿಸುವೆಕೆಯನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕು. ವೃತ್ತಿಪರ ವಲಯಗಳಾಗಿರಬಹುದು, ಸಂಗಾತಿಗಳ ಹುಡುಕಾಟದಂತಹ ಜೀವನದ ಪ್ರಮುಖ ವಿಚಾರಗಳನ್ನು, ನಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಿಸುವಿಕೆಯ ಮುಖಾಂತರ ನಿರ್ಧರಿಸುವಂತಹ ಕಾಲಘಟ್ಟದಲ್ಲಿ ನಾವೆಲ್ಲ ಸಂಚರಿಸುತ್ತಾ ಇದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರೊಫೈಲುಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವಂತದು ಬಹಳ ಮುಖ್ಯ ಎಂದು ಉದ್ಯಮಿ, ಸಾಮಾಜಿಕ ಮಾಧ್ಯಮ ತಜ್ಜ್ನ ಕಿರಣ ಶೆಣೈ ಹೇಳಿದರು.

ಇತ್ತೀಚೆಗೆ ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಬಿವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲಂ ಮೇಕಿಂಗ್ ವಿದ್ಯಾರ್ಥಿಗಳಿಗೆ ನಡೆಸಿದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸೈಬರ್ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಒಂದು ದಿನದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣದ ನಿರ್ವಹಿಸುವಿಕೆಯ ಕುರಿತಾಗಿ ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ಈ ಸಂಧರ್ಬದಲ್ಲಿ ಪ್ರಾಧ್ಯಪಕರಾದ ಅಶ್ವಿನಿ ಜೈನ್, ಮಾಧವ ಹೊಳ್ಳ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *