Breaking News

ಸಾಲಿಗ್ರಾಮ ಪ.ಪಂ ಸಭೆಯಲ್ಲಿ ಕಸ ವಿಲೇವಾರಿ ಭಾರೀ ಚರ್ಚೆ

ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆ ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್ ಗಾಣಿಗ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಾರಾಹಿ ನೀರನ್ನು ಪ.ಪಂ.ವ್ಯಾಪ್ತಿಗೆ ಕುಡಿಯಲು ಬಳಸಿಕೊಳ್ಳುವ ಕುರಿತು, ಕಸ ವಿಲೇವಾರಿಯ ಬಗ್ಗೆ ಚರ್ಚೆ ನಡೆಯಿತು ಮತ್ತು ಅಸಮರ್ಪಕ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನೋರ್ವನ್ನನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹ ಕೇಳಿ ಬಂತು. ಸಭೆಯಲ್ಲಿ ಯಾವುದೇ ಗೌಜು-ಗಲಾಟೆಗಳಿಲ್ಲದೆ ಅಭಿವೃದ್ಧಿ ಪರ ಚರ್ಚೆ ನಡೆದಿದ್ದು ವಿಶೇಷವಾಗಿತ್ತು.ಇನ್ನು ಪ.ಪಂ. ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಸುರೇಶ ಶೆಟ್ಟಿ ಎನ್ನುವ ಗುತ್ತಿಗೆದಾರ ಕೆಲವೊಂದು ಕಾಮಗಾರಿಗಳನ್ನು ಅಸಮರ್ಪಕವಾಗಿ ನಿರ್ವಹಿಸಿದ್ದು, ಇದರಿಂದ ಸರಕಾರದ ಅನುದಾನ ದುರ್ಬಳಕೆಯಾಗಿದೆ ಹಾಗೂ ಇದನ್ನು ಪ್ರಶ್ನಿಸಿದ ಸದಸ್ಯರಿಗೂ ಈತ ಅಗೌರವ ತೋರಿದ್ದಾನೆ. ಆದ್ದರಿಂದ ಈತನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸದಸ್ಯರಾದ ಸಂಜೀವ ದೇವಾಡಿಗ ಆಗ್ರಹಿಸಿದರು. ಈ ಕುರಿತು ಉಪಾಧ್ಯಕ್ಷ ಉದಯ ಪೂಜಾರಿ ಸೇರಿದಂತೆ ಹಲವು ಸದಸ್ಯರು ಒಮ್ಮತ ಸೂಚಿಸಿದರು. ಈ ವಿಚಾರದಲ್ಲಿ ಕಾನೂನಿನ ಪ್ರಕಾರ ಪರಿಶೀಲಿಸಿ, ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಾಽಕಾರಿ ಶ್ರೀಪಾದ್ ಪುರೋಹಿತ್ ನೀಡಿದರು.

Related posts

Leave a Reply