Header Ads
Header Ads
Breaking News

ಸಿದ್ಧಗಂಗಾ ಶ್ರಿಗಳು ಲಿಂಗೈಕ್ಯರಾದ ಹಿನ್ನಲೆ,ಉದ್ಯೋಗ ಮೇಳ ಮತ್ತು ಕೌಶಲ್ಯ ಪ್ರದರ್ಶನ ಮುಂದೂಡಿಕೆ:ವೇದವ್ಯಾಸ್ ಕಾಮತ್ ಹೇಳಿಕೆ

ಕೌಶಲ್ಯ ಭಾರತ ಸಶಕ್ತ ಭಾರತ ಉದ್ಯೋಗ ಮೇಳ ಮತ್ತು ಕೌಶಲ್ಯ ಪ್ರದರ್ಶನವನ್ನು ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಕಾರಣದಿಂದ ಮುಂದೂಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ಸ್ಕಿಲ್ ಇಂಡಿಯಾ ಯೋಜನೆಯಡಿ ’ಕೌಶಲ್ಯ ಭಾರತ ಸಶಕ್ತ ಭಾರತ’ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗುರಿಯೆಡೆಗೆ ಸಾಗುವ ಹಾದಿಯ ಮತ್ತೊಂದು ಅಂಗವಾಗಿ ಉದ್ಯೋಗ ಮೇಳ ಮತ್ತು ಕೌಶಲ್ಯ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ ನಡೆದಾಡುವ ದೇವರು ಶತಾಯುಷಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಕಾರಣದಿಂದ ಮುಂದೂಡಲಾಗಿದೆ. ಉದ್ಯೋಗ ಮೇಳಕ್ಕೆ ಆಗಮಿಸಬೇಕೆಂದಿದ್ದ ಯುವಕರಲ್ಲಿ ಮತ್ತು ಜನತೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ ಇನ್ನು ಮುಂದಿನ ಕೆಲವು ದಿನಗಳಲ್ಲಿ ಉದ್ಯೋಗ ಮೇಳ ನಡೆಯುವ ದಿನ ನಿಗದಿ ಪಡಿಸಿ ತಿಳಿಸಲಾಗುವುದು ಎಂದು ಹೇಳಿದರು.

Related posts

Leave a Reply