Header Ads
Header Ads
Breaking News

ಸುರತ್ಕಲ್‌:ಬಿಗ್ ಆಪಲ್ ಅ ಯುನಿಟ್ ಆಫ್ ಗಿಪ್ಟ್ ಸೆಂಟರ್ ಶುಭಾರಂಭ

 ಇತ್ತೀಚ್ಚಿಗೆ ತುಂಬಾನೆ ವೇಗವಾಗಿ ಬೆಳೆಯುತ್ತಿರುವ ಸುರತ್ಕಲ್ ನಗರದ ಬೆಳವಣಿಗೆಗೆ ಇನ್ನೊಂದು ಮಹಾನ್ ಕೊಡುಗೆ ಎಂಬಂತೆ ಬಿಗ್ ಆಪಲ್ ಅ ಯುನಿಟ್ ಆಫ್ ಗಿಪ್ಟ್ ಸೆಂಟರ್ ಸಂಪೂರ್ಣ ಫ್ಯಾಸ್ಸಿ ಹಾಗೂ ಗಿಷ್ಟ್ ಮಳಿಗೆಯು ಸುರತ್ಕಲ್‌ನ ಕುಡ್ವಾಸ್ ಗ್ಯಾಂಡೂರ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

 ಸುರತ್ಕಲ್ ಇತ್ತೀಚ್ಚಿನ ದಿನಗಳಲ್ಲಿ ತುಂಬಾನೆ ವೇಗವಾಗಿ ಅಭಿವೃದ್ದಿ ಕಾಣುತ್ತಿರುವ ಪ್ರದೇಶ.. ಹೌದು .. ಸುರತ್ಕಲ್ ಜನತೆಯ ಮೊಗದಲ್ಲಿ ಮತ್ತಷ್ಟು ಖುಷಿ ತರಿಸಲು ಇದೀಗ ನಗರದ ಕುಡ್ವಾಸ್ ಗಾಂಡೂರ್ ಕಟ್ಟಡದಲ್ಲಿ ಬಿಗ್ ಆಪಲ್ ಅ ಯುನಿಟ್ ಆಫ್ ಗಿಷ್ಟ್ ಸೆಂಟರ್ ಉದ್ಘಾಟನೆಗೊಂಡಿತು. ನೂತನ ಮಳಿಗೆಯನ್ನು ಫಾರೂಕ್ ಸಖಾಫಿಯವರು ದುವಾ ನೆರವೇರಿಸಿ ನೂತನ ಮಳಿಗೆಗೆ ಶುಭ ಹಾರೈಸಿದರು.
ಇದೇ ಸಂದರ್ಭ ಮಾತನಾಡಿದ ಮುಮ್ತಾಝ್ ಅಲಿ, ಗ್ರಾಹಕರ ಅನುಕೂಲಕ್ಕಾಗಿ ಇಂತಹ ಸಕಲ ಸೌಲಭ್ಯಗಳನ್ನೊಳಗೊಂಡ ಮಳಿಗೆ ಸುರತ್ಕಲ್ ಪ್ರದೇಶದಲ್ಲಿ ಬೇರೆಲ್ಲೂ ಕಾಣಸಿಗುವುದು ವಿರಳ ಎಂದರು . ನಂತರ ಮಾತನಾಡಿದ ಸುರತ್ಕಲ್ ಮಾಜಿ ಶಾಸಕ ಮೋಯ್ದಿನ್ ಬಾಬಾ ಬಿಗ್ ಆಪಲ್ ಅ ಯುನಿಟ್ ಆಫ್ ಗಿಫ್ಟ್ ಸೆಂಟರ್ ಸುರತ್ಕಲ್ ಜನರ ಪಾಲಿಗೆ ದೊಡ್ಡ ಕೊಡುಗೆ ಎಂದರು .
ಇದೇ ಸಂದರ್ಬ ಮಳಿಗೆ ಮಾಲಕರಾದ ಶರೀಫ್ ಹಾಜಿ, ತನ್ವೀರ್ ಅಹಮದ್, ತಸ್ಲೀಮ್ ಅಹಮದ್, ಆಶಿಫ್ ಹಾಜಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು . ಬಿಗ್ ಆಪಲ್ ಅ ಯುನಿಟ್ ಆಫ್ ಗಿಪ್ಟ್ ಸೆಂಟರ್‌ನಲ್ಲಿ ನಿಮ್ಮ ಮನೆ ಮನ ಸೌಂಧರ್ಯವನ್ನು ಇಮ್ಮಡಿಗೊಳಿಸುವ ಎಲ್ಲಾ ವಸ್ತುಗಳೂ ಕೈಗೆಟಕುವ ದರದಲ್ಲಿ ಲಭ್ಯವಿದೆ. ಈ ಗಿಪ್ಟ್ ಮಳಿಗೆಯಲ್ಲಿ ದೇಶ ವಿದೇಶದೆಲ್ಲೆಡೆಯಿಂದ ಆಮದು ಮಾಡಿಕೊಂಡ ಡೈನಿಂಗ್ ಸೆಟ್ , ವಿಭಿನ್ನ ಮಾದರಿಯ ಪ್ಲಾಸ್ಟಿಕ್ ಬೊಕ್ಕೆಗಳು , ಮನೆ ಬಳಕೆಗೆ ಬೇಕಾಗುವ ಸ್ಟೈಲಿಶ್ ವಸ್ತುಗಳು, ಡಾಲ್, ಬ್ಯಾಗ್, ವಿಭಿನ್ನ ಮಾದರಿಯ ಗ್ಲಾಸ್ ವಸ್ತುಗಳು , ವೈವಿಧ್ಯಮಯ ಫೋಟೋ ಫ್ರೆಮ್‌ಗಳು, ವೈರೈಟಿ ವೈರೆಟಿ ಟಾಯಿಸ್, ಬ್ಯಾಗಲ್, ಜುವೆಲ್ಲರಿ ಸೆಟ್ , ವಿವಿಧ ಬ್ರಾಂಡಿನ ಪರ್‌ಪ್ಯೂಮ್, ಬ್ಯಾಡಿ ಲೋಶನ್, ಒಟ್ಟಾರೆಯಾಗಿ ನಿಮಗೆ ಹಾಗೂ ನಿಮ್ಮ ಮನೆಯ ಸೌಂಧರ್ಯವನ್ನು ಇಮ್ಮಡಿಗೊಳಿಸುವಂತಹ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ.
ಶರತ್

Related posts

Leave a Reply