Header Ads
Header Ads
Breaking News

ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

ಮೊದಲ ಮಳೆಗೆ ಮಂಗಳೂರಿನಲ್ಲಿ ಭಾರೀ ಅವಘಡ ಬಳ್ಳಾಲ್ ಬಾಗ್, ಕದ್ರಿ ಕಂಬಳ, ಫಳ್ನೀರ್ ಸಹಿತ ನಗರದ ಹಲವು ಕಡೆಗಳಲ್ಲಿ ನುಗ್ಗಿದ ನೀರು ರಸ್ತೆಯಲ್ಲಿ ತುಂಬಿದ ನೀರಿನಿಂದ ವಾಹನ ಸವಾರರ ಪರದಾಟ.ಮಂಗಳೂರಿನಲ್ಲಿ ಮೊದಲ ಮಳೆಗೆ ಆವಾಂತರ ಸೃಷ್ಠಿಯಾಗಿದೆ. ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳೂರಿನ ಕದ್ರಿ ಕಂಬಳ, ಫಳ್ನೀರ್, ಬಳ್ಳಾಲ್‌ಭಾಗ್, ಸಹಿತ ಮಂಗಳೂರು ನಗರದಾದ್ಯಂತ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದು ಮಾತ್ರವಲ್ಲ ರಸ್ತೆಯೇ ತೋಡಾಗಿ ಮಾರ್ಪಾಡಾದಂತಹ ಸ್ಥಿತಿಯುಂಟಾಗಿದೆ. ಕೆಲವು ಕಡೆಗಳಲ್ಲಿ ರಸ್ತೆಯಾವುದು ಚರಂಡಿ ಯಾವುದು ಎಂದು ತೋಚದೇ ವಾಹನ ಸವಾರರು ಪರದಾಡುವಂತಾಗಿದೆ. ಇಂದು ಬೆಳಿಗ್ಗೆಯಿಂದಲೇ ಸುರಿದ ಭಾರೀ ಮಳೆಯಿಂದಾಗಿ ಆವಾಂತರ ಸೃಷ್ಠಿಯಾಗಿದೆ. ಮಂಗಳೂರಿನ ಕೆಲವು ಕಡೆ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರಿನಿಂದಾಗಿ ಜನರಿಗೆ ದಿಕ್ಕು ತೋಚದಂತಾಗಿದೆ.

ವಾರದ ಹಿಂದೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದರು. ಈಗ ಅಲ್ಲಲ್ಲಿ ನಿಂತಿರುವ ನೀರು ಮತ್ತು ಆವರಿಸುತ್ತಿರುವ ನೆರೆ ನೋಡಿದಾಗ ಇವರ ಸಿದ್ಧತೆ ಯಾವ ಮಟ್ಟದ್ದು ಎಂದು ತೋರಿಸಿಕೊಡುತ್ತದೆ. ಮಳೆಯ ಆರಂಭೀಕ ಹಂತದಲ್ಲಿ ಈ ರೀತಿ ಅವ್ಯವಸ್ಥೆಯಾದರೆ ಮುಂದಿನ ದಿನಗಳಲ್ಲಿ ನಿರಂತರ ಮಳೆಗೆ ಜನರು ಯಾವ ರೀತಿಯ ಸಮಸ್ಯೆ ಅನುಭವಿಸಬಹುದು ಎಂಬ ಪ್ರಶ್ನೆ ಸಾರ್ವತ್ರಿಕವಾಗಿ ಕಾಡುತ್ತಿದೆ.   

ಮಂಗಳೂರು ನಗರದಲ್ಲಿ ಮಳೆಯಿಂದಾಗಿ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ ಎಲ್ಲಿ ನೋಡಿದರಲ್ಲಿ ಸಂಚಾರ ದಟ್ಟನೆ ಇದೆ. ನಗರದ ಪ್ರಮುಖ ಭಾಗಗಳಲ್ಲಿ ವಾಹನಗಳಲ್ಲಿ ಸಾಗದಿರುವುದೇ ಲೇಸು ಎಂದು ಪೊಲೀಸ್ ಸಂಚಾರಿ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಅವರು ಮಾಹಿತಿ ನೀಡಿದರು. ಜ್ಯೋತಿ ಸರ್ಕಲ್, ಬಳ್ಳಾಲ್‌ಭಾಗ್, ಕೊಟ್ಟಾರ ಚೌಕಿ, ಪಡೀಲ್, ತೊಕ್ಕೊಟ್ಟು ಜಂಕ್ಷನ್, ಪಂಪವೆಲ್ ಜಂಕ್ಷನ್, ಸೆಂಟ್ರಲ್ ರೈಲ್ವೆ ಸ್ಟೇಷನ್, ಸಿಟಿ ಹಾಸ್ಪಿಟಲ್ ಜಂಕ್ಷನ್ ಮತ್ತು ಪೊಲೀಸ್ ಕಮಿಷನರ್ ಕಚೇರಿ ಈ ಪ್ರದೇಶಗಳಲ್ಲಿ ಸಂಚಾರಿ ದಟ್ಟನೆ ಹೆಚ್ಚಾಗಿದೆ, ಇನ್ನಷ್ಟು ವಾಹನಗಳು ಬ್ಲಾಕ್ ಆಗದಂತೆ ತಡೆಯುವ ನಿಟ್ಟಿನಲ್ಲಿ ನಾಗರಿಕರು ಸಹಕರಿಸಬೇಕು. ಈ ಪ್ರದೇಶಗಳಲ್ಲಿ ಪ್ರಯಾಣ ಕೈಗೊಳ್ಳಬಾರದೆಂದು ಉಮಾ ಪ್ರಶಾಂತ್ ಅವರು ನಗರದ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Related posts

Leave a Reply