Header Ads
Header Ads
Breaking News

ಸುಳ್ಯದಲ್ಲಿ ಪ್ರಕೃತಿ ವಿಕೋಪ ಎದುರಿಸಲು ಸಿದ್ದತಾ ಸಭೆ

ತಾಲೂಕಿನಲ್ಲಿ ಮಳೆಗಾಲ ಆರಂಭವಾಗಿದ್ದು, ಪ್ರಕೃತಿ ವಿಕೋಪ ಎದುರಿಸಲು ತಾಲೂಕು ಆಡಳಿತ ಸನ್ನದ್ಧರಾಗಬೇಕು. ಮಳೆಯಿಂದ ಅಥವಾ ಇತರ ಘಟನೆಗಳಿಂದ ಅವಘಡ ಸಂಭವಿಸುವ ಮೊದಲೇ ಅಧಿಕಾರಿಗಳು ಜಾಗೃತರಾಗಬೇಕು. ಪ್ರಕೃತಿ ವಿಕೋಪ ಸಂಭವಿಸಿದರೆ ತಾಲೂಕಿನ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ತಕ್ಷಣ ಸ್ಪಂದಿಸಬೇಕು. ಅದಕ್ಕಾಗಿ ಕಂಟ್ರೋಲ್ ರೂಮ್ ತೆರೆಯಲಾಗಿದೆ ಎಂದು ಪುತ್ತೂರು ಸಹಾಯಕ ಕಮೀಷನರ್ ಆರ್. ರಘುನಂದನ್ ಮೂರ್ತಿ ಹೇಳಿದರು.ಅವರು ಸುಳ್ಯದ ತಾಲೂಕು ಕಚೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ಎದುರಿಸಲು ಸಿದ್ದತಾ ಸಭೆಯಲ್ಲಿ ಮಾತನಾಡಿ ಮಳೆಗಾಲದಲ್ಲಿ ಪ್ರಕೃತಿ ವಿಕೋಪಗೊಂಡು ಮನೆ ಅಥವಾ ಇನ್ನಿತರ ಯಾವುದಾದರೂ ಜನರ ಅಗತ್ಯತೆಗಳಿಗೆ, ಸಾರ್ವಜನಿಕರಿಗೆ ಹಾನಿಯಾದರೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಸಾಂತ್ವನ ಮತ್ತು ಪರಿಹಾರ ನೀಡಬೇಕು ಎಂದು ಸಲಹೆ ಮಾಡಿದರು.
ಸಭೆಯಲ್ಲಿದ್ದ ತಹಶೀಲ್ದಾರ್ ಎಂ.ಎಂ.ಗಣೇಶ್ ಮಾತನಾಡಿ, ಈವರೆಗೆ ಸುಬ್ರಹ್ಮಣ್ಯದ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಅಲ್ಲದೇ ಕಂದಾಯ ಇಲಾಖೆಯಿಂದ ಅಲ್ಲಿಗೆ ಕಾವಲು ಕಾಯುವ ವ್ಯವಸ್ಥೆ ಮಾಡಲಾಗಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಆ ಸಂದರ್ಭ ಅಲ್ಲಿಗೆ ತೆರಳಬೇಕಿತ್ತು. ಆದರೆ ಈಗ ಅಲ್ಲಿ ಪರ್ಯಾಯ ಸೇತುವೆ ನಿರ್ಮಾಣಗೊಂಡ ಕಾರಣ ಅಲ್ಲಿಯ ಸಮಸ್ಯೆ ನಿವಾರಣೆಯಾಗಿದೆ ಎಂದರು.
ಕುಮಾರಾಧಾರ ಹಳೆ ಸೇತುವೆಯಲ್ಲಿ ವಾಹನ ಅಥವಾ ಸಾರ್ವಜನಿಕರು ತೆರಳದಂತೆ ಸೇತುವೆ ಸಂಪೂರ್ಣ ಮುಚ್ಚಬೇಕು ಎಂದು ಕಾರ್ಯನಿರ್ವಹಣಾಧಿಕಾರಿಗಳಿಗೆ ಎ.ಸಿ.ಯವರು ಸೂಚಿಸಿದರು. ಅಪಾಯಕಾರಿ ಮರಗಳನ್ನು ಮಾಹಿತಿ ಬಂದ ತಕ್ಷಣ ತೆರವುಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಿ.ಡಿ.ಓ.ಗಳು ಅಪಾಯದ ಸ್ಥಿತಿಯಲ್ಲಿರುವ ಮರ ಸೂಚಿಸುವಂತೆ ಹೇಳಿದರು.ಸುಳ್ಯ ಉಪನಿರೀಕ್ಷಕರಾದ ಚಂದ್ರಶೇಖರ್‌ರವರು ಅಂಬ್ಯುಲೆನ್ಸ್ ವಾಹನದ ಬಗ್ಗೆ ಎ.ಸಿ.ಯವರ ಗಮನ ಸೆಳೆದರು. ಸುಳ್ಯ ಬೆಳ್ಳಾರೆ ತಲಾ 1ರಂತೆ 108ಅಂಬ್ಯಲೆನ್ಸ್ ಇದೆ. ಸುಬ್ರಹ್ಮಣ್ಯದಲ್ಲಿ 108 ಅಂಬ್ಯಲೆನ್ಸ್ ಇಲ್ಲ. ಇದರಿಂದ ಸಮ್ಯೆಯಾಗುತ್ತಿದೆ. ಸುಬ್ರಹ್ಮಣ್ಯದಲ್ಲಿ ಅಪಘಾತ ಸಂಭವಿಸಿದರೆ ಅಲ್ಲಿನವರು ಸುಳ್ಯ ಅಥವಾ ಬೆಳ್ಳಾರೆಗೆ ಕರೆ ಮಾಡಿ ತರಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಅದು ತುರ್ತು ಸಂದರ್ಭ ಸಿಗದೇ ಸಮಸ್ಯೆಯಾಗುತ್ತಿದೆ ಎಂದರು.
ಮಳೆ ಹಾನಿಗಳಾದರೆ ತಕ್ಷಣ ಪರಿಹಾರ ನೀಡಿ. ಅದಕ್ಕಾಗಿ ತಡ ಮಾಡಬೇಡಿ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿದ್ದ ಗೃಹರಕ್ಷದಳದ ಅಬ್ದುಲ್ ಗಫೂರ್‌ರವರು ಪ್ರಕೃತಿ ವಿಕೋಪ ಸಮಯದಲ್ಲಿ ತಕ್ಷಣ ಸ್ಪಂಧಿಸಲು ನಮಗೆ ಸರಿಯಾದ ಸೌಲಭ್ಯಗಳಿಲ್ಲ. ಜ್ಯಾಕೇಟ್, ಮರ ತುಂಡರಿಸುವ ಮಿಷನ್, ಕತ್ತಿ ಮುಂತಾದ ಪರಿಕರಗಳನ್ನು ಒದಿಸುವಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಎ.ಸಿ.ಯವರು ಯಾವುದೆಲ್ಲ ಪರಿಕರಗಳು ಬೇಕೆಂದು ವಿವರ ನೀಡಿ ಒದಗಿಸುತ್ತೇವೆ ಎಂದರು
ಸಭೆಯಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್, ನ.ಪಂ ಮುಖ್ಯಾಧಿಕಾರಿ ಚಂದ್ರಕುಮಾರ್, ಶಿಕ್ಷಣಧಿಕಾರಿ ಕೆಂಪಲಿಂಗಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರಶೇಖರ್ ಪೇರಾಲು, ಸುಳ್ಯ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ಪಂಜ ವಲಯದ ಪ್ರಶಾಂತ್ ಶೆಟ್ಟಿ, ಇvರರು ಉಪಸ್ಥಿತರಿದ್ದರು.

Related posts

Leave a Reply