Breaking News

ಸೌಂದರ್ಯವೆಂಬುದು ಬಾಹ್ಯಕ್ಕೆ ಮಾತ್ರ ಸೀಮಿತವಲ್ಲ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡ ತೃಪ್ತಿ ಹೇಳಿಕೆ

ಸೌಂದರ್ಯವೆಂಬುದು ಕೇವಲ ಬಾಹ್ಯಕ್ಕೆ ಮಾತ್ರ ಸೀಮಿತವಲ್ಲ ಇದು ಆಂತರಿಕಕ್ಕೂ ಅಳವಡಿಸುತ್ತದೆ ಎಂಬುದನ್ನು ಮಿಸಸ್ ಕರ್ನಾಟಕದ ಫಸ್ಟ್ ರನ್ನರ್ ಅಪ್ ತೃಪ್ತಿ ಅರವಿಂದ್ ಹೇಳಿದರು, ಇವರು 2017ನೇ ಸಾಲಿನ ಮಿಸಸ್ ಇಂಡಿಯಾ ಸ್ಪರ್ಧೆಯ ಫಸ್ಟ್ ರನ್ನರ್ ಆಪ್ ವಿಜೇತೆ ಆದ ಬಳಿಕ ವಿ೪ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ಇವರು ತೃಪ್ತಿ ಅರವಿಂದ್, ವೃತ್ತಿಯಲ್ಲಿ ಪ್ರಾದ್ಯಾಪಕಿ. ಕೆಲಸದ ಒತ್ತಡದ ಮದ್ಯೆಯೂ ಸಂಸಾರವನ್ನು ನಿಭಾಯಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುತ್ತಿರುವುದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇವರು ಈ 2017 ಮಿಸಸ ಇಂಡಿಯಾ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಆಪ್ ಕಿರೀಟವನ್ನು ಮುಡಿಗೇರಿಸಿಕೊಂಡವರು. ಇವರು ಕೇವಲ ಸೌಂದರ್ಯ ಸ್ಪರ್ಧೆಯಲ್ಲಿ ಮಾತ್ರ ಪ್ರಥಮರಾಗಿರದೆ, ಸಮಾಜಮುಖಿ ಕೆಲಸಗಳಲ್ಲೂ ಯಾವತ್ತೂ ಮುಂದು. ಇವರು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಮಹಿಳೆಯರ ಮತ್ತು ಮಕ್ಕಳ ಏಳಿಗೆಗಾಗಿ ಹಲವಾರು ರೀತಿಯ ಶಿಬಿರಗಳನ್ನು ನಡೆಸಿರುವುದು ವಿಶೇಷವಾಗಿದೆ. ಗ್ರಾಮಿಣ ಪ್ರದೇಶದಲ್ಲಿ ಹಿಂದುಳಿದ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನೂ ಕೂಡಾ ಹಮ್ಮಿಕೊಂಡಿದ್ದಾರೆ. ಇವರು ಮಂಗಳೂರಿಗೆ ಭೇಟಿ ಇತ್ತ ಸಂದರ್ಭ ವಿ೪ನ್ಯೂಸ್ ಇವರನ್ನು ಮಾತುಕತೆ ನಡೆಸಿದಾಗ ಹಲವಾರು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನು ಮಹಿಳೆಯರು ಸ್ವಾವಲಂಬಿಯಾಗುವುದರೊಂದಿಗೆ ತಮ್ಮನ್ನು ತಾವು ಸಮಾಜದಲ್ಲಿ ಸುರಕ್ಷಿತರನ್ನಾಗಿಸಿ ಜೀವನ ಸಾಗಿಸಲು ಸಾಧ್ಯ. ಅಲ್ಲದೆ ಮನೆಯಲ್ಲಿ ಗಂಡಸರಿಂದ ಆಗುವಂತಹ ಶೋಷಣೆಯಿಂದಲೂ ಮುಕ್ತರಾಗಿ ಸಮಾಜಕ್ಕೆ ಮಾದರಿಯಾಗಿ ಜೀಸಲು ಸಾಧ್ಯ ಎನ್ನುತ್ತಾರೆ ಇವರು.
ಇನ್ನು ಜುಲೈ 4 ರಂದು ಚೆನೈನಲ್ಲಿ ಮಿಸಸ್ ಇಂಡಿಯಾ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕವನ್ನು ಇವರು ಹಾಗೂ ಇನ್ನಿಬ್ಬರು ಪ್ರತಿನಿಧಿಸಲಿದ್ದಾರೆ ಎಂದು ಇವರು ಇದೇ ಸಂದರ್ಭದಲ್ಲಿ ತಿಳಿಸಿದರು.

Related posts

Leave a Reply