Header Ads
Breaking News

ಹೆಜಮಾಡಿ ಶ್ರೀಮಹಾಲಿಂಗೇಶ್ವರ ದೇವಳದ ವಾರ್ಷಿಕ ಉತ್ಸವ

ಹೆಜಮಾಡಿಯ ಹಿತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಮಹೋತ್ಸವ ಬಹಳ ವಿಜ್ರಂಬಣೆಯಿಂದ ನಡೆದಿದ್ದು, ಪುತ್ತಿಗೆ ಶ್ರೀ ಸುಗುಣೇಂದ್ರ ಸ್ವಾಮೀಜಿ ಸಹಿತ ಸಹಸ್ರಾರು ಭಕ್ತಾಧಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಪ್ರಕೃಯೆ ಆರಂಭಗೊಂಡು, ದೇವರ ಅಪ್ಪಣೆಯಂತೆ ಒಂದು ಹಂತದ ಜೀರ್ಣೋದ್ಧಾರ ಮುಗಿಸಿ ವಾರ್ಷಿಕ ಉತ್ಸವ ನಡೆದಿದೆ. ಉತ್ಸವ ಮುಗಿದ ತಕ್ಷಣ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಿದ್ದು ಮುಂದಿನ ಜಾತ್ರೆಗೆ ಮುನ್ನ ಎಲ್ಲಾ ಕೆಲಸ ಕಾರ್ಯಗಳು ಮುಗಿಯುವ ವಿಶ್ವಾಸ ವ್ಯಕ್ತ ಪಡಿಸುತ್ತಿದೆ ಜೀರ್ಣೋದ್ಧಾರ ಸಮಿತಿ. ವಾರ್ಷಿಕ ಉತ್ಸವದ ಸಂದರ್ಭ ನಡೆದ ಯುವತಿಯರ ಭಜನಾ ಕುಣಿತ ಭಕ್ತ ಸಮೂಹವನ್ನು ಮಂತ್ರಮುಗ್ಧರನ್ನಾಗಿಸಿದೆ. ಜಾತ್ರೆಯ ದಿನ ಮಧ್ಯಾಹ್ನ ಹಾಗೂ ರಾತ್ರಿ ನಡೆದ ಸಾರ್ವಜನಿಕ ಅನ್ನ ಪ್ರಸಾದನ್ನು ಸಹಸ್ರಾರು ಭಕ್ತಾಧಿಗಳು ಸೇವಿಸಿದ್ದರು. ಇದೀಗ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ವಜಸ್ತಂಭದ ಮರವನ್ನು ತೈಲಾಧಿವಾಸ ಮಾಡುವ ಕಾರ್ಯ ನಡೆಯಲಿದ್ದು, ಈ ಧಾರ್ಮಿಕ ಇದಕ್ಕೆ ಬೇಕಾಗುವ ಶುದ್ಧ ಎಳ್ಳೆಣ್ಣೆಯನ್ನು ಭಕ್ತಾಧಿಗಳು ಹರಕೆಯ ರೂಪದಲ್ಲಿ ನೀಡ ಬಹುದಾಗಿದ್ದು, ದೇವಳದಲ್ಲೂ ಈ ಶುದ್ಧ ಎಣ್ಣೆ ಮಿತ ದರದಲ್ಲಿ ದೊರೆಯಲಿದೆ ಎಂಬುದಾಗಿ ದೇವಳದ ಆಡಳಿತ ಸಮಿತಿ ತಿಳಿಸಿದೆ.

Related posts

Leave a Reply

Your email address will not be published. Required fields are marked *