Breaking News

ಹೊರ ಗುತ್ತಿಗೆ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯ

ಕರ್ನಾಟಕ ರಾಜ್ಯ ಸರಕಾರಿ ಹೊಸ್ಟಲೇ ಹಾಗೂ ವಸತಿ ಶಾಲಾ ಹೊರ ಗುತ್ತಿಗೆದಾರ ನೌಕಕರರ ಸಂಘ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಹೊರ ಗುತ್ತಿಗೆ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಸರಕಾರಿ ಹೊಸ್ಟೆಲ್ ಗಳಲ್ಲಿ ಹೊರ ಗುತ್ತಯಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರನ್ನು ಕಾಯಂಗೊಳಿಸಬೇಕು .ಹೋಸ್ಟೇಲ್ ಅಡುಗೆ ಕೆಲಸ ಗಾರರರಿಗೆ 10ನೇ ತರಗತಿ ಕಡ್ಡಾಯ ಗೊಳಿಸಿರುದನ್ನು ರದ್ದು ಗೊಳಿಸಬೇಕು. ಹೊರ ಗುತ್ತಿಗೆ ಪದ್ದತಿಯನೇ ತೆಗೆದು ಹಾಕ ಬೇಕು ಎಮದು ಒತ್ತಾಯಿಸಿದರು. ಈ ಸಂಧರ್ಭ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮತಾನಾಡಿದ ಸಿ‌ಐಟಿಯುನ ಪ್ರಧಾನ ಕಾರ್ಯಧರ್ಶಿ ವೆಂಕಟೇಶ್ ಕೋಣಿ ಮಾತನಾಡಿ ಕಾರ್ಮಿಕರನ್ನು ರಾಜ್ಯ ಸರಕಾರ ಗುಲಾಮರಂತೆ ದುಡಿಸಿಕೊಳುತ್ತಿದೆ. ವಿದ್ಯಾರ್ಥಿ ನಿಲಯದಲ್ಲಿ ಕೆಲಸ ಮಾಡುವ ಅಡುಗೆಯವರಿಗೆ ೧೦ ನೇ ತರಗತಿ ವರೆಗೆ ಶಿಕ್ಷಣ ಕಡ್ಡಾಯ ಗೊಳಿಸಿರುದು ಸರಿಯಲ್ಲ ಅವರಿಗೆ ಅಡುಗೆ ಮಾಡುದರಲ್ಲಿ ಅನೇಕ ವರ್ಷಗಳ ಅನುಭವವಿದೆ. ಹೊರ ಗುತ್ತಿಗೆ ಪದ್ಧತಿ ಅನಿಷ್ಠ ಪದ್ಧತಿಯಾಗಿದೆ ಎಂದು ಅದನ್ನು ಕೂಡಲೇ ರದ್ದು ಗೊಳಿಸಬೇಕು ಎಂದು ತಿಳಿಸಿದರು.

ವರದಿ: ಪಲ್ಲವಿ ಸಂತೋಷ್

Related posts

Leave a Reply