Header Ads
Header Ads
Breaking News

47ನೇ ವರ್ಷದ ಸುಳ್ಯ ದಸರಾಕ್ಕೆ ವೈಭವಯುತ ತೆರೆ

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ದಸರಾ ಉತ್ಸವ ಸಮಿತಿಯ ಆಶ್ರಯದಲ್ಲಿ 9 ದಿನಗಳ ಕಾಲ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪೂಜಿಸಲ್ಪಟ್ಟ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಸುಳ್ಯ ದಸರಾ ಸಂಪನ್ನಗೊಂಡಿತ್ತು.ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ವತಿಯಿಂದ ನಡೆಯುವ 47ನೇ ವರ್ಷದ ಸುಳ್ಯ ದಸರಾ 2018ಅ. 14ರಂದು ಶಾರದಾ ದೇವಿಯ ಪ್ರತಿಷ್ಠೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ದೇವಸ್ಥಾನದ ಎದುರಿನ ಶಾರದಾಂಬಾ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.ದಸರಾ ಶೋಭಾಯತ್ರೆಗೆ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸಮಿತಿಯ ಗೋಕುಲ್‌ದಾಸ್, ನಾರಾಯಣ ಕೇಕಡ್ಕ ಮೊದಲಾದವರು ಉಪಸ್ಥಿತರಿದ್ದರು.ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯತ್ ಇಲಾಖೆ, ಅರಣ್ಯ ಇಲಾಖೆ, ನ.ಪಂ. ಸುಳ್ಯ, ಲೋಕೋಪಯೋಗಿ ಇಲಾಖೆ, ಶಾಸಕರ ನೇತೃತ್ವದ ಬ್ರಹ್ಮ ಮೊಗೇರ್ಕಳ ದೈವಸ್ಥಾನ ದಾಸನಕಜೆ, ವೀರ ಕೇಸರಿ ವಿಷ್ಣುಸರ್ಕಲ್, ಗಜಕೇಸರಿ ಜಟ್ಟಿಪಳ್ಳ, ಡಿಜೆ ಫ್ರೆಂಡ್ಸ್ ಹಲೆಗೇಟು, ಶ್ರೀನಿಧಿ ಮಹಿಳಾ ಮಂಡಲ ಕಾಯರ್ತೋಡಿ ಸೂರ್ತಿಲ, ಶ್ರೀ ಭಗವತಿ ಯುವ ಸೇವಾ ಸಂಘ ಬೂಡು-ಕೇರ್ಪಳ, ಬೊಳಿಯಮಜಲು, ಉಡುಪಿಯ ಬಾಹುಬಲಿ ಚಿತ್ರದ ಕೋಣ, ನಗರ ಪಂಚಾಯತ್ ರಥಶ್ರೀ ಗ್ರೂಪ್ಸ್ ಟ್ಯಾಬ್ಲೋ ವತಿಯಿಂದ ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಇದೇ ಸಂದರ್ಭ ಬೆನಕ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ಶಾಸ್ತ್ರೀ ವೃತ್ತದ ಬಳಿ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಂಸ್ಕೃತಿಕ ಕಲಾ ಸಂಘದಿಂದ ರಸಮಂಜರಿ ನಡೆಯಿತು. ಸುಳ್ಯ ಮೆಸ್ಕಾಂ ವತಿಯಿಂದ ಸಿಡಿಮದ್ದು ಪ್ರದರ್ಶನ ನಡೆಯಿತು.ಶ್ರೀ ದೇವಿಯ ಶೋಭಾಯಾತ್ರೆಯ ವಾಹನವನ್ನು ಬಿ.ಸಿ.ರೋಡಿನ ಸುಕನ್ಯಾ ಎಂಬವರು ಚಲಾಯಿಸಿ ಗಮನ ಸೆಳೆದರು. ಜೊತೆಗೆ ವಿದ್ಯುತ್ ದೀಪಗಳಿಂದ ಕಂಗೋಳಿಸುವ ಚಲಿಸುವ ಸ್ತಬ್ಧ ಚಿತ್ರಗಳು, ಮಂಗಳೂರಿನ ಹುಲಿ ವೇಷ ತಂಡ, ಚಲಿಸುವ ಸಂಗೀತ ರಸಮಂಜರಿ, ಕಿವಿಗಪ್ಪಿಸುವ ನಾಸಿಕ್ ಬ್ಯಾಂಡ್‌ಗಳ ಅಬ್ಬರ, ಕೊಂಬು ವಾಲಗ, ವಿಶೇಷ ಸುಡುಮದ್ದುಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಶಾರಾದಾಂಬಾ ಕಲಾ ವೇದಿಕೆಯಿಂದ ಹೊರಟು ಸುಳ್ಯದ ಪ್ರಮುಖ ಬೀದಿಗಳಲ್ಲಿ ಸಾಗಿ ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜ್ ರಸ್ತೆ, ಜೂನಿಯರ್ ಕಾಲೇಜು ರಸ್ತೆಯಾಗಿ ಶ್ರೀರಾಂ ಪೇಟೆಯಾಗಿ, ಹಳೆಗೇಟಿಗೆ ಹೋಗಿ ಬಳಿಕ ಜಟ್ಟಿಪಳ್ಳ, ಬಾಳೆಮಕ್ಕಿಯಾಗಿ, ಗಾಂಧಿನಗರಕ್ಕೆ ಹೋಗಿ ಬಳಿಕ ಪಯಸ್ವಿನಿ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು. ಶ್ರೀ ದೇವಿಯ ಮೂರ್ತಿಯನ್ನು ಪಯಸ್ವಿಸಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

Related posts

Leave a Reply