Header Ads
Header Ads
Header Ads
Header Ads
Header Ads
Header Ads
Breaking News

ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಇಲ್ಲವೇ ಹೊಸದಾಗಿ ಕಟ್ಟಡ ನಿರ್ಮಿಸುವ ಯೋಜನೆ ಇದೆ : ಡಾ.ಭರತ್ ಶೆಟ್ಟಿ

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿ ಸಹಿತ ಒಟ್ಟು ಹತ್ತು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಹಸಿರು ಕಟ್ಟಡ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಇಲ್ಲವೇ ಹೊಸದಾಗಿ ಕಟ್ಟಡ ನಿರ್ಮಿಸುವ ಯೋಜನೆ ಇದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಕಾವೂರು ಕುಂಜತ್ತಬೈಲಿನಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿಗಳು ಇದೀಗ ಸೌಲಭ್ಯದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸರಕಾರಿ ಸೌಲಭ್ಯಗಳು ಇಲ್ಲಿಂದಲೇ ಸಿಗುತ್ತವೆ. ಹೀಗಾಗಿ ಮಾದರಿ ಅಂಗನವಾಡಿಗಳ ನಿರ್ಮಾಣ ಅಗತ್ಯ ಎಂದರು.

ಈ ಸಂದರ್ಭ ಮಾಜಿ ಉಪಮೇಯರ್ ಮಹಮ್ಮದ್, ಅಂಗನವಾಡಿ ಸೂಪರ್‌ವೈಸರ್ ಮಾಧುರಿ ಎಸ್., ಮಾಜಿ ಕಾರ್ಪೊರೇಟರ್ ಶರತ್ ಕುಮಾರ್, ಮರಕಡ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ, ಬಾಲವಿಕಾಸ ಸಮಿತಿಯ ಮಂಜುಳಾ, ಸ್ತ್ರೀ ಜಾಗೃತಿ ಸಮಿತಿಯ ಸಂಶಾದ್, ದೇವೀ ಪ್ರೆಂಡ್ಸ್ ಸರ್ಕಲ್‌ನ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *