Header Ads
Header Ads
Header Ads
Breaking News

ಅಂಗನವಾಡಿ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣದ ಆರೋಪ ಗ್ರಾಮಸ್ಥರಿಂದ ಪ್ರತಿಭಟನೆ ವಿಟ್ಲದ ಕೆದಿಲ ಗ್ರಾಮದ ಕರಿಮಜಲ್ ಅಂಗನವಾಡಿ ಕೇಂದ್ರದಲ್ಲಿ ಧರಣಿ

ಅಂಗನವಾಡಿ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕೆದಿಲ ಗ್ರಾಮದ ಕರಿಮಜಲ್ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಈ ವೇಳೆ ತಾ.ಪಂ ಸದಸ್ಯ ಆದಂಕುಂಞಿ ಯವರು ಮಾತನಾಡಿ ಬಡವರ ಆಸ್ತಿಯನ್ನು 24 ಗಂಟೆಯೊಳಗೆ ಎತ್ತಂಗಡಿ ಮಾಡೋ ಕಂದಾಯ ಇಲಾಖೆ ತಮ್ಮ ಸರಕಾರಿ ಸಂಸ್ಥೆಯ ಜಾಗವನ್ನೇ ಅತಿಕ್ರಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಇಷ್ಟು ನಿರಾಸಕ್ತಿ ತೋರುತ್ತಿದೆ. ಯಾರದೋ ವ್ಯಯಕ್ತಿಕ ಹಿತಾಸಕ್ತಿಗೋಸ್ಕರ ಸರಕಾರಿ ಸಂಸ್ಥೆಗಳ ಜಾಗವನ್ನು ಬಲಿ ಕೊಡುವುದು ಎಷ್ಟು ಸರಿ, ಜನಪ್ರತಿನಿಧಿಗಳಾದ ನಮ್ಮ ಬೇಡಿಕೆ ,ಮನವಿಗೆ ಸ್ಪಂದಿಸಿ ದಿದ್ದರೆ ನಾವು ಜನಪರ ಕೆಲಸದಲ್ಲಿ ತೊಡಗುವುದು ಹೇಗೆ. ನಮಗೆ ನ್ಯಾಯ ಬೇಕು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಮಾನ್ಯ ಂ ಅ ಯವರು ಸ್ಥಳಕ್ಕೆ ಬೇಟಿ ಕೊಟ್ಟು ನಮಗೆ ಶಾಶ್ವತ ಪರಿಹಾರ ಒದಗಿಸುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯ ಉಮೇಶ್ ಪೂಜಾರಿ ಮುರುವ, ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಕುಲಾಲ್, ಕರಿಮಜಲ ಅಂಗನವಾಡಿ ಬಾಲ ವಿಕಾಸ ಅಧ್ಯಕ್ಷೆ ,ಕೆದಿಲ ಗ್ರಾಮ ಪಂಚಾಯತ್ ಸದಸ್ಯೆ ಬೇಬಿ ಎಂ ಮುರುವ, ಸುದರ್ಶನ್ ಆಚಾರ್ಯ, ಪದ್ಮನಾಭ ಭಟ್ ಪೆರ್ನಾಜೆ, ಬಿ ಅಬ್ದುಲ್ ಖಾದರ್,ಪ್ರವೀಣ್ ಕಲ್ಲಾಜೆ, ಸ್ಥಳೀಯರಾದಂತಹ ವಿಜಯ್ ಡಿಸೋಜಾ ,ಪ್ರಸಾದ್ ಕರಿಮಜಲ್. ಅರುಣ್ ,ದಿನೇಶ್ ಮುರುವ .ಲಿಂಗಪ್ಪ ಗೌಡ. ಮಾರ್ಷಲ್, ಬಾಬು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply