Header Ads
Header Ads
Breaking News

ಅಂಗಾರರರಿಗೆ ತಕ್ಷಣ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಬೇಕು : ಆದಿ ದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯ

6 ಬಾರಿ ಶಾಸಕರಾಗಿ ಆಯ್ಕೆ ಯಾಗಿರುವ ಸುಳ್ಯದ ಎಸ್.ಅಂಗಾರರಿಗೆ ಸಚಿವ ಸ್ಥಾನ ತಪ್ಪಿರುವುದು ನೋವಿನ ಸಂಗತಿ. ಅವರಿಗೆ ತಕ್ಷಣ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಬೇಕು ಎಂದು ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಬಾಬು ಕೆ.ಎಂ ಆಗ್ರಹಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಆರೆ ಕೊನೆಯ ಕ್ಷಣದಲ್ಲಿತಪ್ಪಿದೆ. ಸಚಿವರಾಗುತ್ತಿದ್ದರೆ ಈ ಭಾಗದ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಆದ್ದರಿಂದ ಇನ್ನಾದರೂ ಅವರಿಗೆ ಸಚಿವ ಸ್ಥಾನ ನೀಡಬೇಕು. ಸ್ಥಾನ ನೀಡದೇ ಇದ್ದರೆ ಎಲ್ಲ ದಲಿತ ಸಂಘಟನೆಗಳು ಒಟ್ಟಾಗಿ ಸೇರಿ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ನಮ್ಮ ಹೋರಾಟ ತೋರಿಸುತ್ತೇವೆ ಎಂದ ಅವರು ಜಿಲ್ಲೆಯ 6 ಶಾಸಕರು ಕೂಡಾ ಧ್ವನಿ ಎತ್ತದಿರುವುದು ಸರಿಯಲ್ಲ ಎಂದವರು ಹೇಳಿದರು. ಈ ಸಂದರ್ಭ ಅಧ್ಯಕ್ಷ ಮೋನಪ್ಪ ರಾಜಾರಾಂ ಪುರ, ಕಾರ್ಯದರ್ಶಿ ದಿಲೀಪ್ ಕೊಡಿಯಾಲಬೈಲು, ಖಜಾಂಜಿ ಮಲ್ಲೇಶ್ ಕುಡೆಕಲ್ಲು, ವಿಜಯ ಆಲಡ್ಕ, ಚಂದ್ರಕಾಂತ ಮೂಡಾಯಿತೋಟ, ಜಗನ್ನಾಥ, ಕೇಶವ ಕಲ್ಪಡ, ಶ್ರವಣ್ ಕುಮಾರ್ ಇದ್ದರು.

Related posts

Leave a Reply

Your email address will not be published. Required fields are marked *