Header Ads
Breaking News

ಅಂತರರಾಷ್ಟ್ರೀಯ ವೇಯ್ಟ್ ಲಿಪ್ಟರ್ ಲೋಕನಾಥ್ ಬೋಳಾರ್ ನಿಧನ

ಮಂಗಳೂರಿನ ಮೀನುಗಾರರ ಮುಖಂಡರು, ಅಂತರಾಷ್ಟ್ರೀಯ ವೇಯ್ಟ್ ಲಿಪ್ಟರ್, ಲೋಕನಾಥ್ ಬೋಳಾರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಅವರಿಗೆ 73ವರ್ಷ ಪ್ರಾಯವಾಗಿತ್ತು.

ಕೊಡುಗೈ ದಾನಿಯಾಗಿದ್ದ ಅವರು, ಮೀನುಗಾರಿಕಾ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕೆಯ ಮೀನು ಮಾರಾಟ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದವರು. ಇವರನ್ನು ಮೀನುಗಾರರು ನಮ್ಮ ಪಾಲಿನ ದೇವರೆಂದು ಸಂಭೋಧಿಸುತ್ತಿದ್ದರು, ರಾಜ್ಯ ಮೀನುಗಾರಿಕಾ ಇಲಾಖೆಗೆ ಮೀನುಗಾರರ ಪರ ಸಲಹೆಗಾರರಾಗಿದ್ದರು. ಕರಾವಳಿ ಕರ್ಣಾಟಕದ ಆಪದ್ಬಾಂಧವರಾಗಿದ್ದರು. ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದ ಲೋಕನಾಥ್ ಬೋಳಾರ್ ರವರು ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು, ಕರ್ಣಾಟಕ ರಾಜ್ಯ ಮೀನುಗಾರರ ಕ್ರಿಯಾ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು, ಭಾರ ಎತ್ತುವ ಸ್ಪರ್ಧೆಯಲ್ಲಿ ದೇಶ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿದ್ದರು. ಜಾವೆಲಿನ್ ತ್ರೋ, ಗುಂಡು ಎಸೆತ ಕ್ರೀಡೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ, ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದರು, ತಿಂಗಳಾಯ ಮೂಲಸ್ಥಾನದ ಜೀರ್ಣೋದ್ಧಾರದ ರೂವಾರಿಯೂ ಆಗಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರು ಮಾತ್ರವಲ್ಲದೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Related posts

Leave a Reply

Your email address will not be published. Required fields are marked *