Header Ads
Header Ads
Breaking News

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಜೀಜಾಬಾಯಿ ಪುರಸ್ಕಾರ : ಕ್ರೀಡಾ ಭಾರತಿಯ ಗೌರವ ಅಧ್ಯಕ್ಷ ಬಿ. ನಾಗರಾಜ್ ಶೆಟ್ಟಿ ಹೇಳಿಕೆ

ರಾಷ್ಟ್ರೀಯ ಸಮಗ್ರತಾಭಾವವನ್ನು ಮೂಡಿಸಿ ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಭವಿಷ್ಯದ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟಗಳು ಸಾಕಷ್ಟು ಪದಕಗಳನ್ನು ವಿಜೇತರಾಗಬೇಕೆಂಬ ದಿಟ್ಟ ಹೆಜ್ಜೆಯೊಂದಿಗೆ ಆಗಸ್ಟ್ 28ರಂದು ಮಂಗಳೂರಿನ ಸಂಘನಿಕೇತನದಲ್ಲಿ ಕ್ರೀಡಾ ಪ್ರತಿಭಾ ಪುರಸ್ಕಾರ, ಜೀಜಾಬಾಯಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಕ್ರೀಡಾಭಾರತಿಯ ಗೌರವ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ತಿಳಿಸಿದರು.ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮಂಗಳೂರು ಘಟಕವು ಸಾರ್ವಜನಿಕ ಸಿಕ್ಷಣ ಇಲಾಖೆ ಮತ್ತು ದಕ್ಷಿಣ ಕನ್ನಡ ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳ ಸಹಕಾರದೊಂದೊಗೆ ರಾಜ್ಯ-ರಾಷ್ಟ್ರಮಟ್ಟದ ಎಸ್‌ಜಿಎಫ್‌ಐನವರು ನಡೆಸಿದ ಕ್ರೀಡಾಕೂಟದ ವಿಜೇತರನ್ನು ನಗದು ಹಾಗೂ ಅರ್ಹತಾ ಪ್ರತಗಳೊಂದಿಗೆ ಗೌರವಿಸಲಾಗುವುದು ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕ್ರೀಡಾಭಾರತಿಯ ಅಧ್ಯಕ್ಷರಾದ ಕಾರಿಯಪ್ಪ ರೈ, ಸಂಯೋಜಕರಾದ ಭೋಜರಾಜ್ ಕಲ್ಲಡ್ಕ, ಪ್ರಮೋದ್ ಅರಿಗ, ಹರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *